Home » ದಿಲ್ಲಿ: ಒಂದೇ ರನ್‌ವೇನಲ್ಲಿ ಎರಡು ವಿಮಾನ: ತಪ್ಪಿದ ಭಾರೀ ದುರಂತ!

ದಿಲ್ಲಿ: ಒಂದೇ ರನ್‌ವೇನಲ್ಲಿ ಎರಡು ವಿಮಾನ: ತಪ್ಪಿದ ಭಾರೀ ದುರಂತ!

0 comments
Aiplane Milage

ಹೊಸದಿಲ್ಲಿ:ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಅರಿಯಾನ ಅಫ್ಘಾನ್ ಏರ್‌ಲೈನ್ಸ್ ವಿಮಾನವು, ನಿಗದಿತ ರನ್ ವೇ ಬದಲಾಗಿ ಮತ್ತೊಂದು ರನ್ ವೇನಲ್ಲಿ ಇಳಿದ ಘಟನೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸೋಮವಾರ ಅಫ್ಘಾನ್ ವಿಮಾನವು ತಪ್ಪಾಗಿ ಇಳಿದ ರನ್‌ವೇ ಮೂಲಕವೇ ಹಾರಲು ಇನ್ನೊಂದು ವಿಮಾನ ಸಜ್ಜಾಗಿ ನಿಂತಿತ್ತು. ಆದರೆ ಅಫ್ಘಾನ್ ವಿಮಾನ ಆ ರನ್ ವೆ ನಲ್ಲಿ ಇಳಿದು ಬಿಟ್ಟಿದೆ. ಈ ಸಮಯದಲ್ಲಿ ಅದೃಷ್ಟವಶಾತ್ ಮತ್ತೊಂದು ವಿಮಾನವು ರನ್‌ವೇ ಮೇಲೆ ಸಾಗುತ್ತಿರಲಿಲ್ಲದ ಕಾರಣ ಸಂಭಾವ್ಯ ದುರ್ಘಟನೆಯೊಂದು ತಪ್ಪಿದಂತಾಗಿದೆ.

ಅಫ್ಘಾನ್ ವಿಮಾನಕ್ಕೆ ರನ್‌ವೇ 29-ಎಲ್‌ನಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು. ಆದರೆ, ಆ ವಿಮಾನವು ತಪ್ಪಿ 29-ಆರ್ ರನ್‌ವೇನಲ್ಲಿ ಇಳಿದಿದೆ. ವಿಮಾನದಲ್ಲಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ವಿಮಾನ ರನ್ ವೇ ಮೇಲೆ ಇಳಿಯಲು ನಿರ್ದೇಶಿಸುವ ವ್ಯವಸ್ಥೆ) ಕೈಕೊಟ್ಟಿತ್ತು. ಹೀಗಾಗಿ ದಿಲ್ಲಿಯ ಮಂಜು ಮುಸುಕಿದ ಆಕಾಶದ ಮೇಲಿಂದ ಕಣ್ಣಂದಾಜಿನಲ್ಲೇ ವಿಮಾನವನ್ನು ಇಳಿಸಿರುವುದಾಗಿ ಅಫ್ಘಾನ್ ಪೈಲಟ್ ತಿಳಿಸಿದ್ದು, ವೈಮಾನಿಕ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.

You may also like