Home » UP: ಹಿಂದು ಸ್ವಾಮೀಜಿಗಳಂತೆ ವೇಷ ಧರಿಸಿ ತಿರುಗುತ್ತಿದ್ದ ಮೂವರು ಮುಸ್ಲಿಮರ ಬಂಧನ- ವೇಷ ಮರೆಸಲು ಅಸಲಿ ಕಾರಣವೇನು ಗೊತ್ತಾ?

UP: ಹಿಂದು ಸ್ವಾಮೀಜಿಗಳಂತೆ ವೇಷ ಧರಿಸಿ ತಿರುಗುತ್ತಿದ್ದ ಮೂವರು ಮುಸ್ಲಿಮರ ಬಂಧನ- ವೇಷ ಮರೆಸಲು ಅಸಲಿ ಕಾರಣವೇನು ಗೊತ್ತಾ?

0 comments

UP: ಹಿಂದೂ ಸನ್ಯಾಸಿಗಳ ರೀತಿ ಮೂರು ಮುಸ್ಲಿಂ ವ್ಯಕ್ತಿಗಳು ವೇಷ ಧರಿಸಿಕೊಂಡು ತಿರುಗುತ್ತಾ ಪೊಲೀಸರ ಕೈಗೆ ತಗಲಾಕ್ಕೊಂಡಿರುವಂತಹ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ (UP) ಬಸ್ತಿ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ಫುಲ್​ ಮಹಮ್ಮದ್, ಮಹಮ್ಮದ್ ಹದೀಶ್ ಹಾಗೂ ಲಾಲ್ಕು ಎಂಬ ಮೂವರು ವ್ಯಕ್ತಿಗಳು ಹಿಂದು ಸನ್ಯಾಸಿಗಳ ವೇಷದಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದ್ರೆ ಅವರ ವರ್ತನೆಯನ್ನು ಕಂಡು ಅನುಮಾನಗೊಂಡ ಗ್ರಾಮಸ್ಥರು ಮೂವರನ್ನು ಹಿಡಿದು ಕೆಲವು ಅನುಮಾನಾಸ್ಪದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸಿಟ್ಟಿಗೆದ್ದ ಸ್ಥಳೀಯರು ಮೂವರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಈ ಮೂವರು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಧುಗಳಾಗಿ ಭಿಕ್ಷೆ ಬೇಡುತ್ತಾರೆ ಮತ್ತು ಅದರಿಂದಲೇ ತಮ್ಮ ಜೀವನವನ್ನು ನಡೆಸುತ್ತಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment