Asiacup-2025: ಏಪ್ರಿಲ್ 22 ರಂದು 26 ಅಮಾಯಕರ ಸಾವಿಗೆ ಕಾರಣವಾದ ಘೋರ ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯಕ್ಕೂ ಮುನ್ನ ‘ಪಾಕಿಸ್ತಾನದೊಂದಿಗೆ ಕ್ರಿಕೆಟ್ ಇಲ್ಲ’ ಎಂಬ ಕೂಗುಗಳು ಬಲಗೊಂಡಿತ್ತು. ಆದರೆ ಪಿಒಕೆ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು.
ಬಹಾವಲ್ಪುರ್, ಮುರಿಯ್ಕೆ ಮತ್ತು ಸಿಯಾಲ್‌ಕೋಟ್‌ನ ಪ್ರಮುಖ ಸ್ಥಳಗಳನ್ನು ಒಳಗೊಂಡಂತೆ ಈ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಬಲಿ ಪಡೆಯಲಾಗಿತ್ತು. ಇದಾದ ಬಳಿಕ ಕ್ರಿಕೆಟ್ ಆಟದ ಬಗ್ಗೆ ಬಿಸಿಸಿಐಗೆ ಸರ್ಕಾರ ಏನ್ ಹೇಳಿದೆ ನೋಡೋಣ.
ಪಾಕಿಸ್ತಾನ ವಿರುದ್ದದ ಭಾರತದ ಏಷ್ಯಾಕಪ್ 2025 ಪಂದ್ಯದ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಬಿಸಿಸಿಐನ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಔಪಚಾರಿಕವಾಗಿ ರೂಪಿಸುವ ವಿಷಯವನ್ನು ನಾವು ಅನುಸರಿಸಬೇಕು” ಎಂದು ಹೇಳಿದರು. ಇತ್ತೀಚೆಗೆ, ಯಾವುದೇ ಬಹುರಾಷ್ಟ್ರೀಯ ಪಂದ್ಯಾವಳಿ ಅಥವಾ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತದ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ನಮ್ಮ ನೀತಿಯು ಜಾರಿಯಲ್ಲಿದೆ.
ಇತ್ತೀಚಿನ ನೀತಿಯನ್ನು ಉಲ್ಲೇಖಿಸಿದ ಸೈಕಿಯಾ, “ಕೇಂದ್ರ ಸರ್ಕಾರವು ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಆದ್ದರಿಂದ ಟೀಮ್ ಇಂಡಿಯಾ ಯಾವುದೇ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಡಬೇಕಾಗಿದೆ” ಎಂದು ಅವರು ANI ಗೆ ತಿಳಿಸಿದ್ದಾರೆ.
