Home » ಕೈಯಲ್ಲಿ ಅಸ್ತಿಪಂಜರ ಹಿಡಿದುಕೊಂಡು ಸ್ಮಶಾನದಲ್ಲಿ ಕುಣಿದಾಡಿದ ಮಹಿಳೆ!!| ಆ ಬಿಳಿ ಸೀರೆಯುಟ್ಟ ಮೋಹಿನಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ ಅಲ್ಲಿನ ಜನರು

ಕೈಯಲ್ಲಿ ಅಸ್ತಿಪಂಜರ ಹಿಡಿದುಕೊಂಡು ಸ್ಮಶಾನದಲ್ಲಿ ಕುಣಿದಾಡಿದ ಮಹಿಳೆ!!| ಆ ಬಿಳಿ ಸೀರೆಯುಟ್ಟ ಮೋಹಿನಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ ಅಲ್ಲಿನ ಜನರು

by ಹೊಸಕನ್ನಡ
0 comments

ಇತ್ತೀಚೆಗೆ ಕೆಲವು ವಿಚಿತ್ರವಾದ ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾಮೂಲಾಗಿದೆ. ಹಾಗೆಯೇ ಇಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೊ ಭಯಾನಕವಾಗಿದೆ.

ಅದೇನೆಂದರೆ ಮಹಿಳೆ ಬಿಳಿ ಬಣ್ಣದ ಡ್ರೆಸ್ ತೊಟ್ಟು ಅಸ್ಥಿಪಂಜರದೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಇಂಗ್ಲೆಂಡ್​ನಲ್ಲಿ ಸ್ಮಶಾನದ ಎದುರು ನಡೆದಿದೆ. ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಈ ದೃಶ್ಯ ಕಂಡಿದ್ದು ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ. ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ದೃಶ್ಯ ನೋಡಿದಾಕ್ಷಣ ಭಯದ ಜೊತೆಗೆ ನಾನಾ ಪ್ರಶ್ನೆಗಳು ಹುಟ್ಟುಕೊಳ್ಳುತ್ತಿವೆ ಅಂತಿದ್ದಾರೆ ನೆಟ್ಟಿಗರು.

ವೈರಲ್ ಆದ ಫೋಟೋದಲ್ಲಿ ಮಹಿಳೆಯು ಬಿಳಿ ವಸ್ತ್ರ ತೊಟ್ಟಿದ್ದಾಳೆ. ತನ್ನ ಕೈಗಳಲ್ಲಿ ಅಸ್ಥಿಪಂಜರ ಹಿಡಿದು ನೃತ್ಯ ಮಾಡುತ್ತಿದ್ದಾಳೆ. ಮತ್ತೊಂದು ಚಿತ್ರದಲ್ಲಿ ಗಮನಿಸುವಂತೆ ಮಹಿಳೆ ಅಸ್ಥಿಪಂಜರದ ಜೊತೆ ಏನೋ ಮಾತನಾಡುತ್ತಿರುವಂತೆ ಅನಿಸುತ್ತಿದೆ. ತಕ್ಷಣವೇ ಮಾಧ್ಯಮಕ್ಕೆ ವಿಷಯ ತಿಳಿಸಿದ ಪ್ರಯಾಣಿಕರು ಶಾಲೆಯ ಎದುರಿರುವ ಸ್ಮಶಾನದಲ್ಲಿ ಅವಳು ನೃತ್ಯ ಮಾಡುತ್ತಿದ್ದಳು ಎಂದು ಹೇಳಿದ್ದಾರೆ.

ಇನ್ನೋರ್ವ ಪ್ರತ್ಯಕ್ಷದರ್ಶಿ ಮಾತನಾಡಿ, ಶಾಲೆಯ ಕಲಾ ಯೋಜನೆಯಾಗಿರಬೇಕು. ನಾಟಕ, ಡ್ರಾಮಾದಂಥಹ ಕೆಲವು ವಿಷಯಗಳ ಕುರಿತು ಪ್ರಾಕ್ಟೀಸ್ ಮಾಡುತ್ತಿರಬಹುದು ಎಂದು ಹೇಳಿದ್ದಾರೆ. ದಿ ಡೈಲಿ ಮೇಲ್ ವರದಿಯ ಪ್ರಕಾರ, ಹಲ್ ಜನರಲ್ ಸ್ಮಶಾನವನ್ನು ಸುಮಾರು 50 ವರ್ಷಗಳಿಂದ ಬಳಕೆ ಮಾಡಲಾಗುತ್ತಿಲ್ಲ. 1894ರ ಸಮಯದಲ್ಲಿ ಕಾಲರಾ ರೋಗದಿಂದ ಸಾವಿಗೀಡಾದವರನ್ನು ಸಮಾಧಿ ಮಾಡಲು ಆ ಸ್ಥಳವನ್ನು ಬಳಸಲಾಗಿತ್ತು ಎಂಬುದು ತಿಳಿದು ಬಂದಿದೆ.

ಒಟ್ಟಿನಲ್ಲಿ ಆ ಮಹಿಳೆಯನ್ನು ನೋಡಿ ಹಲವು ಪ್ರಯಾಣಿಕರು ಭಯ ಬಿದ್ದಿದ್ದು ಮಾತ್ರ ಸುಳ್ಳಲ್ಲ. ಆಕೆಯನ್ನೇ ಭೂತ ಎಂದುಕೊಂಡವರು ಅದೆಷ್ಟೋ ಮಂದಿ ರಾತ್ರಿ ನಿದ್ದೆ ಕೂಡ ಮಾಡಿರಲಿಕ್ಕಿಲ್ಲ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

You may also like

Leave a Comment