Falcon-9 rocket: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹಾರಾಟ ನಡೆಸಲಿರುವ ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ತೋರಿಸುವ ಫೋಟೋವನ್ನು ಸ್ಪೇಸ್‌ಎಕ್ಸ್ ಹಂಚಿಕೊಂಡಿದೆ. ಈ ಕಾರ್ಯಾಚರಣೆಯು ಶುಕ್ಲಾ ಅವರನ್ನು ISSಗೆ ಹೋದ ಮೊದಲ ಭಾರತೀಯನನ್ನಾಗಿ ಮಾಡುತ್ತದೆ. ಈ ಬಾಹ್ಯಾಕಾಶ ನೌಕೆಯು ಶುಕ್ಲಾ ಅವರನ್ನು ಹೊರತುಪಡಿಸಿ ಇತರ ಮೂವರು ಗಗನಯಾತ್ರಿಗಳನ್ನು ಹೊತ್ತೊಯ್ಯಲಿದ್ದು, ಅವರು ಯುಎಸ್, ಹಂಗೇರಿ ಮತ್ತು ಪೋಲೆಂಡ್‌ನವರಾಗಿದ್ದಾರೆ.
ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 10 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್ ಮರುಬಳಕೆ ಮಾಡಬಹುದಾದ ಫಾಲ್ಕನ್ -9 ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದ್ದು, ವಾಹನವನ್ನು ಕಕ್ಷೆಗೆ ತಲುಪಿಸಿದ ನಂತರ ಭೂಮಿಗೆ ಹಿಂತಿರುಗಲಿದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ನೌಕೆಯನ್ನು ಚಲಾಯಿಸಲಿದ್ದಾರೆ ಮತ್ತು ಸ್ಪೇಸ್‌ಎಕ್ಸ್ ಮತ್ತು ಆಕ್ಸಿಯಮ್ ಸ್ಪೇಸ್‌ನಿಂದ ಈ ಕಾರ್ಯಾಚರಣೆಗಾಗಿ ತರಬೇತಿ ಪಡೆದಿದ್ದಾರೆ. ವಾಹನದ ಉಡಾವಣೆ ಮತ್ತು ಡಾಕಿಂಗ್ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಅವರು ಹೊಂದಿರುತ್ತಾರೆ, ಇದು ಸಂಪೂರ್ಣವಾಗಿ ಆಟೋಮೇಟಿಕಕ್ ಹಾಗೂ ಇಲ್ಲಿ ಮಾನವ ಯಾವುದೇ ಸಹಾಯದ ಅಗತ್ಯವಿಲ್ಲ.
ಈ ಹಿಂದೆ ನಿಕಟ ಮಿತ್ರರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ನಡುವಿನ ನಾಟಕೀಯ ಜಗಳಕ್ಕೆ ಕೆಲವೇ ಗಂಟೆಗಳ ಮೊದಲು, ಬಾಹ್ಯಾಕಾಶ ನೌಕೆಯನ್ನು ಸ್ಪೇಸ್‌ಎಕ್ಸ್ ನಾಸಾ ಉಡಾವಣಾ ವೇದಿಕೆಗೆ ತರಲಾಯಿತು.
