Home » Shivamogga: ಪೊಲೀಸರ ಮೇಲೆ ದಾಳಿ; ರೌಡಿಶೀಟರ್‌ ಕಾಲಿಗೆ ಗುಂಡು

Shivamogga: ಪೊಲೀಸರ ಮೇಲೆ ದಾಳಿ; ರೌಡಿಶೀಟರ್‌ ಕಾಲಿಗೆ ಗುಂಡು

0 comments

Shivamogga: ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ರೌಡಿಶೀಟರ್‌ ಕಾಲಿಗೆ ಸಬ್‌ಇನ್ಸ್‌ಪೆಕ್ಟರ್‌ ತಮ್ಮ ಆತ್ಮರಕ್ಷಣೆಗೆಂದು ಗುಂಡು ಹಾರಿಸಿರುವ ಘಟನೆಯು ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿಶೀಟರ್‌ ಗುಂಡ ಅಲಿಯಾಸ್‌ ರವಿ ಪೊಲೀಸ್‌ ಸಿಬ್ಬಂದಿ ಆದರ್ಶ್‌ ಅವರ ಮೇಲೆ ದಾಳಿ ಮಾಡಿ ಪರಾರಿಯಾಗಲು ಪ್ರಯತ್ನ ಪಟ್ಟಿದ್ದ. ಈ ಸಮಯದಲ್ಲಿ ಶರಣಾಗುವಂತೆ ಆತನಿಗೆ ಸೂಚನೆ ನೀಡಲಾಯಿತಾದರೂ ಆತ ಮಾತು ಕೇಳದೇ ಪರಾರಿಯಾಗಲು ಯತ್ನ ಮಾಡಿದಾಗ, ಕಾಲಿಗೆ ಗುಂಡು ಹಾರಿಸಲಾಗಿದೆ.

ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗುಂಡ ಅಲಿಯಾಸ್‌ ರವಿ ಮೇಲೆ ನಾಲ್ಕು ಪ್ರಕರಣಗಳು ಇವೆ.

You may also like