Summer Holiday : ರಾಜ್ಯದಲ್ಲಿ ಬೇಸಿಗೆಯ ಝಳ ವಿಪರೀತ ಹೆಚ್ಚುತ್ತಿದೆ. ಬಿಸಿಲ ಬೇಗೆಗೆ ಜನರು ಬೆಂದು ಹೋಗುತ್ತಿದ್ದಾರೆ. ಹೀಗಾಗಿ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಕೈಗೊಂಡಿದ್ದು ಆದಷ್ಟು ಬೇಗ ಶಾಲೆಗಳಲ್ಲಿ ಪರೀಕ್ಷೆಗಳನ್ನು ಮುಗಿಸಿ ಅವಧಿಗೂ ಮುಂಚಿತವಾಗಿ ಬೇಸಿಗೆ ರಜೆ ನೀಡಲು ಚಿಂತಿಸಿದೆ. ಇದೀಗ ಕೊನೆಗೂ ಬೇಸಿಗೆ ರಜೆ ಯಾವಾಗ ಆರಂಭವಾಗಲಿದೆ ಹಾಗೂ ಯಾವಾಗ ಕೊನೆಗೊಳ್ಳಲಿದೆ ಎನ್ನುವ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ.
ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಕಾರ, ಈ ವರ್ಷದ ಬೇಸಿಗೆ ರಜೆಗಳು ಬಹುತೇಕ ಏಪ್ರಿಲ್‌ನಲ್ಲಿಯೇ ಆರಂಭ ಆಗಲಿದ್ದು, ಮೇ ಅಂತ್ಯದವರೆಗೂ ರಜೆ ಇರಲಿದೆ. ಕಳೆದ ವರ್ಷದ ಶೈಕ್ಷಣಿಕ ಅವಧಿಯಲ್ಲಿಯೇ ಹೊರಡಿಸಿದ್ದ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ, 2025ನೇ ಸಾಲಿನ ಬೇಸಿಗೆ ರಜೆಗಳು ಏಪ್ರಿಲ್ 11ರಿಂದಲೇ ಆರಂಭ ಆಗಲಿದ್ದು, 2025ರ ಮೇ 28ರ ವರೆಗೆ ರಜೆಗಳು ಇರಲಿವೆ ಎನ್ನುವ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ.
ಅಲ್ಲದೆ ಏಪ್ರಿಲ್ 10ರಂದು ಮಹಾವೀರ ಜಯಂತಿ ಇದ್ದು, ಅದಕ್ಕಾಗಿ, ಒಂದು ದಿನ ಮುಂಚೆ ಏಪ್ರಿಲ್ 9ರಂದೇ ಫಲಿತಾಂಶ ಪ್ರಕಟಿಸಿ ಶಿಕ್ಷಣ ಇಲಾಖೆ ರಜೆ ಘೋಷಿಸುವ ಸಾಧ್ಯತೆಯಿದೆ. ಇದೀಗ ಸರ್ಕಾರ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
