Home » Atul Subhash Case: ಪ್ರಕರಣ ರದ್ದು ಕೋರಿದ್ದ ಅರ್ಜಿಯನ್ನು ಹಿಂಪಡೆದ ಪತ್ನಿ

Atul Subhash Case: ಪ್ರಕರಣ ರದ್ದು ಕೋರಿದ್ದ ಅರ್ಜಿಯನ್ನು ಹಿಂಪಡೆದ ಪತ್ನಿ

0 comments

Atul Subhash Case: ಪತ್ನಿ ಮತ್ತು ಕುಟುಂಬದ ಸದಸ್ಯರ ಮೇಲೆ ಗಂಭೀರ ಆರೋಪ ಮಾಡಿ ನೇಣಿಗೆ ಶರಣಾದ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಆತನ ಪತ್ನಿ ನಿಖಿತಾ ಸಿಂಘಾನಿಯಾ ಮತ್ತವರ ತಾಯಿ, ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

ನ್ಯಾಯಮೂರ್ತಿ ಎಸ್‌.ಆರ್‌ ಕೃಷ್ಣಕುಮಾರ್‌ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ಪ್ರಕರಣ ಹಿಂಪಡೆಯುವುದಾಗಿ ಮೆಮೋ ಸಲ್ಲಿಸಿದ್ದಾರೆ. ನ್ಯಾಯಪೀಠ ಇದನ್ನು ಪರಿಗಣಿಸಿದ್ದು, ಅರ್ಜಿಯನ್ನು ವಜಾ ಮಾಡಿ, ಮತ್ತೋರ್ವ ಆರೋಪಿ ನಿಖಿತಾ ಚಿಕ್ಕಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 26 ಕ್ಕೆ ಮುಂದೂಡಿದೆ.

You may also like