Home » Auto: ಆಟೋ ಚಾಲಕರಿಗೆ ಶಾಕಿಂಗ್‌ ನ್ಯೂಸ್‌ ನೀಡಿದ RTO

Auto: ಆಟೋ ಚಾಲಕರಿಗೆ ಶಾಕಿಂಗ್‌ ನ್ಯೂಸ್‌ ನೀಡಿದ RTO

by V R
0 comments
Transport Department App For Auto Cab driver

Auto: ನಗರದಲ್ಲಿ ಅನೇಕ ಆಟೋಗಳ ಹಿಂದೆ ಜಾಹೀರಾತು ಹಾಕಿ ಓಡಾಡುತ್ತಿರುವ ಆಟೋ ಚಾಲಕರಿಗೆ ಆರ್‌ಟಿಓ ಶಾಕಿಂಗ್‌ ನ್ಯೂಸ್‌ ನೀಡಿದೆ. 500-1000 ರೂ. ಆಸೆಗೆ ಪೋಸ್ಟರನ್ನು ಅಂಟಿಸಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದರೆ ಸಾವಿರಾರು ರೂ. ಫೈನ್‌ ಕಟ್ಟ ಬೇಕಾಗುತ್ತದೆ.

ಆರ್‌ಟಿಓ ಇದೀಗ ಪೋಸ್ಟರ್‌ ಅಂಟಿಸಿದವರಿಗೆ ಫೈನ್‌ ನಿರ್ಧಾರ ಮಾಡಿದ್ದು, ಬರೋಬ್ಬರಿ 5000 ರೂ. ದಂಡ ವಿಧಿಸಿದೆ. ಇದು ಆಟೋಚಾಲಕರ ಪಾಲಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಆಗಿದೆ.

ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಜಾಹಿರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ ರೂ.5000 ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶವಿದೆ. ಇದು ಆಟೋ ಚಾಲಕರಿಗೆ ಅರಿವಿಲ್ಲ.

You may also like