Ayodya: ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ ಆಗಿದ್ದು, ಪರಿಷ್ಕೃತ ವೇಳಾಪಟ್ಟಿ ಪ್ರಕಟ ಆಗಿದೆ. ಅಕ್ಟೋಬರ್ 23ರಿಂದಲೇ ಹೊಸ ಸಮಯ ಜಾರಿಗೆ ಬಂದಿದೆ.
ಸಮಯ ಬದಲಾವಣೆಗೆ ಕಾರಣವೇನು?
ಉತ್ತರ ಪ್ರದೇಶದ ಆಯೋಧ್ಯೆ ಸೇರಿದಂತೆ ಹಲೆವೆಡೆ ತೀವ್ರ ಚಳಿ ಆರಂಭಗೊಂಡಿದೆ. ಚಳಿಗಾಳ ಆರಂಭಕ್ಕೂ ಮೊದಲೇ ಚಳಿ ತೀವ್ರಗೊಂಡಿದೆ. ಹೀಗಾಗಿ ಭಕ್ತರಿಗೆ ಅನುಕೂಲವಾಗಲು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಮಂಗಳಾರತಿಯಿಂದ ದರ್ಶನ ಸಮಯವೂ ಬದಲಾವಣೆ
ಮಂಗಳಾರತಿ ಬೆಳಗ್ಗೆ 4 ಗಂಟೆಗೆ ನಡೆಯಲಿದೆ. ಆದರೆ ಇನ್ನು ಮುಂದೆ 4.30ಕ್ಕೆ ನಡೆಯಲಿದೆ. ಇನ್ನು ಬೆಳಗ್ಗೆ 6 ಗಂಟೆಗೆ ನಡೆಯುತ್ತಿದ್ದ ಶೃಂಗಾರ ಆರತಿ ಇನ್ನು ಮುಂದೆ 6.30ಕ್ಕೆ ನಡೆಯಲಿದೆ. ಇನ್ನು ಭೋಗ ಆರತಿ, ಭಕ್ತರಿಗೆ ರಾಮ ಲಲ್ಲಾನ ದರ್ಶನ ಸಮಯದಲ್ಲೂ ಬದಲಾವಣೆ ಆಗಿದೆ.
ಭಕ್ತರಿಗೆ ಶ್ರೀರಾಮನ ದರ್ಶನ ಸಮಯ
ಆಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಬೆಳಗ್ಗೆ 6.30ಕ್ಕೆ ದರ್ಶನ ಆರಂಭಗೊಳ್ಳುತ್ತಿತ್ತು. ಆದರೆ ವಿಪರೀತ ಚಳಿ ಆರಂಭಗೊಂಡಿರುವ ಕಾರಣ ಇದೀಗ 7 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶ್ರೀರಾಮ ಮಂದಿರ ಪರಿಷ್ಕೃತ ವೇಳಾಪಟ್ಟಿ
ಮಂಗಳಾರತಿ: ಬೆಳಗ್ಗೆ 4.30ಕ್ಕೆ (ಮೊದಲು ಬೆಳಗ್ಗೆ 4 ಗಂಟೆಗೆ)
ಶೃಂಗಾರ ಆರತಿ: ಬೆಳಗ್ಗೆ 6.30
ಭಕ್ತರಿಗೆ ದರ್ಶನ: ಬೆಳಗ್ಗೆ 7 ಗಂಟೆಯಿಂದ ಆರಂಭ
ಭೋಗ ಆರತಿ: ಮಧ್ಯಾಹ್ನ 12 ಗಂಟೆಗೆ ಆರಂಭ (ಈ ವೇಳೆ 1 ಗಂಟೆ ಭಕ್ತರ ದರ್ಶನ ಸ್ಥಗಿತ, 1 ಗಂಟೆಯಿಂದ ಪುನರ್ ಆರಂಭ)
ದೇಗುಲ ಮುಚ್ಚುವ ಸಮಯ: ರಾತ್ರಿ 9 ಗಂಟೆ ವರೆಗೆ ಭಕ್ತರಿಗೆ ದರ್ಶನ ಇರಲಿದೆ
ಶಾಯನ ಆರತಿ: ರಾಮ ಲಲ್ಲನಿಗೆ ಶಾಯನ ಆರತಿ ರಾತ್ರಿ 9.30ಕ್ಕೆ
