Home » Ayudha pooja: ಆಯುಧ ಪೂಜೆಗೆ ಕಾಸಿಲ್ಲ? 100 ರೂ.ಗೆ 1 ಬಸ್ಸಿನ ಪೂಜೆ ಮುಗ್ಸಿ! ಸಾರಿಗೆ ನಿಗಮ ಸೂಚನೆ

Ayudha pooja: ಆಯುಧ ಪೂಜೆಗೆ ಕಾಸಿಲ್ಲ? 100 ರೂ.ಗೆ 1 ಬಸ್ಸಿನ ಪೂಜೆ ಮುಗ್ಸಿ! ಸಾರಿಗೆ ನಿಗಮ ಸೂಚನೆ

2 comments

Ayudha pooja: ಯಾರದ್ದು ದುಡ್ಡು ಎಲ್ಲಮ್ಮನ ಜಾತ್ರೆ ಮಾಡಿದ್ದು ಕಾಂಗ್ರೆಸ್ ಸರ್ಕಾರ(congress govt). ಉಚಿತ ಬಸ್ ಸೌಕರ್ಯ(Free bus) ಕೊಟ್ಟ ಸರ್ಕಾರಕ್ಕೆ ಈಗ ಆಯುಧ ಪೂಜೆಗೆ(Ayudha pooja) ಬಸ್ ಗಳಿಗೆ ಪೂಜೆ ಮಾಡಲು ನಿಗಮದ ಬಳಿ ಕಾಸಿಲ್ವಂತೆ. ಹಾಗಾಗಿ KSRTC ಬಸ್ ಗಳಿಗೆ ಆಯುಧ ಪೂಜೆ ಸಲ್ಲಿಸಲು 1 ಬಸ್ ಗೆ 100 ರೂಪಾಯಿಯಂತೆ ಬಳಸಲು ಸಾರಿಗೆ ನಿಗಮ(Transport corporation) ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಆಯುಧ ಪೂಜೆ, ಸ್ವಚ್ಛತೆ, ಅಲಂಕಾರಕ್ಕೆ ಕೆಎಸ್ ಆರ್ ಟಿಸಿ ಅಲ್ಪ ಹಣವನ್ನು ಬಿಡುಗಡೆ ಮಾಡಿದೆ. ಒಂದು ಬಸ್ ನ ಸ್ವಚ್ಛತೆ ಅಲಂಕಾರಕ್ಕೆ ಈ ಹಣ ಹೇಗೆ ಸಾಕಾಗುತ್ತಾ ಅನ್ನೋದು ಸಿಬ್ಬಂದಿಗಳ ಅಸಮಾಧಾನ.
100 ರೂಪಾಯಿಗೆ ಒಂದು ಹೂವಿನ ಮಾಲೆ ಕೂಡ ಸಿಗುವುದಿಲ್ಲ. ಆ ಮಟ್ಟಕ್ಕೆ ಬೆಲೆ ಏರಿದೆ. ಹೀಗಿರುವಾಗ ಇಲಾಖೆ ಕೇವಲ 100 ರೂಪಾಯಿ ನೀಡು ಕೈತೊಳೆದುಕೊಳ್ಳುತ್ತಿದೆ ಎಂದು ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯಿಂದ KSRTC ಶಕ್ತಿ ಕಳೆದುಕೊಂಡಿತೇ? ಅವೈಜ್ಞಾನಿಕ ಯೋಜನೆಯಿಂದ ಕೆಎಸ್ ಆರ್ ಟಿಸಿ ಸಂಸ್ಥೆಗೆ ಆಯುಧ ಪೂಜೆ ನಡೆಸಲೂ ದುಡ್ಡು ಇಲ್ಲವಾಯ್ತೆ ಎನ್ನುವ ಅನುಮಾನಗಳು ಇದೀಗ ಶುರುವಾಗಿದೆ. ಭ್ರಷ್ಟಾಚಾರದ ರಾಡಿಯಲ್ಲಿ ಮುಳುಗಿರುವ ಸರ್ಕಾರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನೆನಪೇ ಇಲ್ಲದಾಗಿದೆ.

You may also like

Leave a Comment