Home » ಶಬರಿಮಲೆಯಲ್ಲಿ ಇಂದೇ ಅಯ್ಯಪ್ಪ ಮಕರಜ್ಯೋತಿ ದರ್ಶನ

ಶಬರಿಮಲೆಯಲ್ಲಿ ಇಂದೇ ಅಯ್ಯಪ್ಪ ಮಕರಜ್ಯೋತಿ ದರ್ಶನ

0 comments

ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನದಲ್ಲಿ ಜ.14ರಂದು (ಬುಧವಾರವೇ) ಸಂಜೆ ಅಯ್ಯಪ್ಪ ಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ ವೇಳೆ ಪೊನ್ನಂಬಲಮೇಡ್ ಬೆಟ್ಟದಲ್ಲಿ ಮಕರಜ್ಯೋತಿ ದರ್ಶನವಾಗಲಿದೆ. ಪಂದಳಂ ಅರಮನೆಯಿಂದ ಹೊರಟ ತಿರುವಾಭರಣ ಮೆರವಣಿಗೆಯು ಬುಧವಾರ ಸಂಜೆ 6.30ಕ್ಕೆ ಸನ್ನಿಧಾನ ತಲುಪಲಿದೆ.

ಮಕರಜ್ಯೋತಿ ಮಹೋತ್ಸವಕ್ಕೆ ಸನ್ನಿಧಾನ ಸಜ್ಜುಗೊಂಡಿದೆ. ಭಕ್ತರಿಗೆ ಸುಗಮ ದರ್ಶನವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಜ್ಯೋತಿ ವೀಕ್ಷಣೆಗಾಗಿ ಲಕ್ಷಾಂತರ ಯಾತ್ರಿಕರು ಸನ್ನಿಧಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ.

ಮಕರಜ್ಯೋತಿ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಭದ್ರತೆ ಹಾಗೂ ಭಕ್ತರ ಸುರಕ್ಷತೆಯ ಭಾಗವಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ. ಮಕರಜ್ಯೋತಿ ವ್ಯೂ ಪಾಯಿಂಟ್ ಗಳಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ನೇತೃತ್ವದಲ್ಲಿ ಕಣ್ಣಾವಲು ಬಿಗುಗೊಳಿಸಲಾಗಿದೆ. ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

You may also like