Home » ಇದೊಂದು ಶಾಂತಿ ಕದಡಿಸುವ ದೊಡ್ಡ ಪಿತೂರಿ, ಮಂಗಳೂರು-ಶಿವಮೊಗ್ಗದಲ್ಲಿ ಪುನರಾವರ್ತನೆ – ಬಿ.ವೈ.ವಿಜಯೇಂದ್ರ

ಇದೊಂದು ಶಾಂತಿ ಕದಡಿಸುವ ದೊಡ್ಡ ಪಿತೂರಿ, ಮಂಗಳೂರು-ಶಿವಮೊಗ್ಗದಲ್ಲಿ ಪುನರಾವರ್ತನೆ – ಬಿ.ವೈ.ವಿಜಯೇಂದ್ರ

0 comments

ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಗ್ಗಾನ್‌ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ಪ್ರೇಮ್‌ ಸಿಂಗ್‌ ಆರೋಗ್ಯ ವಿಚಾರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವರ್ಕರ್‌ ಪ್ಲೆಕ್ಸ್‌ ನಿಂದ ಗಲಾಟೆ ನಡೆದಿದ್ದು ಖಂಡಿಸುತ್ತೇನೆ. ಇತಿಹಾಸ ಗೊತ್ತಿಲ್ಲದ ಕೆಲ ಪುಂಡಾರಿಗಳು ಇಂಥಾ ಕೃತ್ಯ ನಡೆಸಿದ್ದಾರೆ ಎಂದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಚಾರ ಮಾಡಿದ್ದಾರೆ. ದೇಶದ ಸ್ವಾಭಿಮಾನಿ ಭಾರತೀಯರಿಗೆ ನೋವಾಗಿದೆ. ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಇದು ಪನರಾವರ್ತನೆ ಆಗುತ್ತಿದೆ ಎಂದರು.

ಇನ್ನು ಇದರ ಹಿಂದೆ ಶಾಂತಿ ಕೆಡಿಸುವ ದೊಡ್ಡ ಪಿತೂರಿ ಇದೆ. ನಿನ್ನೆ ಮೊನ್ನೆ ಕ್ರಿಕೆಟ್‌ ಆಡಿಕೊಂಡಿದ್ದವರು ಚಾಕು ಹಿಡಿದಿದ್ದಾರೆ. ನಮ್ಮ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ . ಇದರ ಹಿಂದೆ ಯಾವ ಸಂಘಟನೆ ಇದೆ ಎಂದು ಹೇಳೊಲ್ಲ. ಅದು ಎಲ್ಲರಿಗೂ ತಿಳಿದಿರುವ ಸೀಕ್ರೆಟ್‌ ಎಂದು ಹೇಳಿದ್ದಾರೆ.

You may also like

Leave a Comment