Home » ತೆವಳಲು ಪ್ರಯತ್ನಿಸುತ್ತಿರುವ ಮುದ್ದಾದ ಮಗುವಿಗೆ ನಾಯಿ ಮರಿಯೊಂದು ತೆವಳಲು ಹೇಳಿಕೊಡುವ ಕ್ಯೂಟ್ ವೀಡಿಯೋ ವೈರಲ್ | ಮಾತೇ ಬಾರದ ಈ ಎರಡು ಪುಟ್ಟ ಮನಸುಗಳ ಮುಗ್ಧ ಸಂಭಾಷಣೆಗೆ ಮನಸೋತ ನೆಟ್ಟಿಗರು !!

ತೆವಳಲು ಪ್ರಯತ್ನಿಸುತ್ತಿರುವ ಮುದ್ದಾದ ಮಗುವಿಗೆ ನಾಯಿ ಮರಿಯೊಂದು ತೆವಳಲು ಹೇಳಿಕೊಡುವ ಕ್ಯೂಟ್ ವೀಡಿಯೋ ವೈರಲ್ | ಮಾತೇ ಬಾರದ ಈ ಎರಡು ಪುಟ್ಟ ಮನಸುಗಳ ಮುಗ್ಧ ಸಂಭಾಷಣೆಗೆ ಮನಸೋತ ನೆಟ್ಟಿಗರು !!

by ಹೊಸಕನ್ನಡ
0 comments

ಈಗೀಗ ಶ್ವಾನ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಗರಗಳಲ್ಲಿ ಪ್ರತಿಯೊಂದು ಮನೆಯಲ್ಲೂ ನಾಯಿಗಳು ಕಾಣಸಿಗುತ್ತವೆ. ಹಾಗೆಯೇ ಮನೆಯಲ್ಲಿ ಸಾಕಿದ ನಾಯಿ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಸದಾ ಮನೆಯವರ ಸುರಕ್ಷತೆಯನ್ನೇ ಬಯಸುತ್ತದೆ. ನಾವು ಎಷ್ಟು ಕಾಳಜಿ, ಪ್ರೀತಿ ಕೊಟ್ಟು ಪ್ರಾಣಿಗಳನ್ನು ನೋಡಿಕೊಳ್ಳುತ್ತೇವೆಯೋ ಅಷ್ಟೇ ಪ್ರೀತಿ ವಿಶ್ವಾಸದೊಂದಿಗೆ ಪ್ರಾಣಿಗಳು ನಮ್ಮೊಂದಿಗೆ ನಡೆದುಕೊಳ್ಳುತ್ತವೆ. ಇದಕ್ಕೆ ಉದಾಹರಣೆಯಂತಿದೆ ಈ ವೀಡಿಯೋ.

ಇದೀಗ ವೈರಲ್ ಆದ ವೀಡಿಯೋದಲ್ಲಿ ಗಮನಿಸುವಂತೆ ಮನೆಯ ಪುಟ್ಟ ನಾಯಿ ಮರಿಯೊಂದು ಮಗುವಿಗೆ ತೆವಳಲು ಹೇಳಿಕೊಡುತ್ತಿದೆ. ಈ ಕ್ಯೂಟ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಕು ಪ್ರಾಣಿಗಳ ತುಂಟಾಟ, ಮೋಜು, ಮಸ್ತಿ ಜೊತೆಗೆ ಕೆಲವು ಕ್ಯೂಟ್ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಇಷ್ಟವಾಗುತ್ತವೆ. ವೀಡಿಯೊವನ್ನು ನೋಡಿದಾಕ್ಷಣ ಮತ್ತೆ ಮತ್ತೆ ಆ ದೃಶ್ಯವನ್ನೇ ನೋಡೋಣ ಅನ್ನುವಷ್ಟರ ಮಟ್ಟಿಗೆ ದೃಶ್ಯ ಮನಸ್ಸಿಗೆ ಹಿಡಿಸಿಬಿಡುತ್ತವೆ. ಅಂತಹುದೇ ಒಂದು ವೀಡಿಯೋ ಇದಾಗಿದ್ದು, ಮುದ್ದಾದ ಪುಟ್ಟ ಮಗು ಮತ್ತು ನಾಯಿ ಮರಿಯ ವೀಡಿಯೋ ಸಖತ್ ವೈರಲ್ ಆಗಿದೆ.

https://twitter.com/susantananda3/status/1461684242241359876?s=20

ಈ ಮುದ್ದಾದ ವೀಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಮಗು ನೆಲದ ಮೇಲೆ ಮಲಗಿದೆ. ಮಗುವಿನ ಎದುರು ಮುದ್ದಾದ ನಾಯಿ ಮರಿಯೊಂದು ಮಲಗಿದೆ. ಮಗು ನೆಲದ ಮೇಲೆ ತೆವಳಲು ಹಂಬಲಿಸುತ್ತಿದೆ ಆದರೆ ಅದಕ್ಕೆ ಸಾಧ್ಯವಾಗುತ್ತಿಲ್ಲ. ನಾಯಿ ಮರಿಯು ಆ ಮಗುವಿಗೆ ತೆವಳಲು ಹೇಳಿಕೊಡುತ್ತಿದೆ. ಈ ವೀಡಿಯೋ ತುಂಬಾನೇ ಮುದ್ದಾಗಿದೆ. ಎಲ್ಲರ ಮನಸ್ಸನ್ನು ಕ್ಷಣಮಾತ್ರದಲ್ಲಿ ಈ ವಿಡಿಯೋ ಕಸಿದುಕೊಂಡಿದೆ.

ವೀಡಿಯೋ ಪೋಸ್ಟ್ ಮಾಡಿದಾಗಿನಿಂದ 57 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನಿಜವಾಗಿಯೂ ವೀಡಿಯೋ ಬಹಳ ಮುದ್ದಾಗಿದೆ ಎಂದೊಬ್ಬರು ಹೇಳಿದ್ದಾರೆ. ನಾಯಿ ಮತ್ತು ಮಗು ಇಬ್ಬರೂ ತುಂಬಾ ಮುದ್ದಾಗಿದ್ದಾರೆ ಎಂದು ಮತ್ತೋರ್ವರು ಹೇಳಿದ್ದಾರೆ. ಮಗುವಿನ ಮನಸ್ಸನ್ನು ನಾಯಿ ಮರಿ ಅರ್ಥ ಮಾಡಿಕೊಂಡಿದೆ, ಎಷ್ಟು ಚುರುಕಾಗಿದೆ ಈ ನಾಯಿ ಮರಿ ಎಂಬ ಅನಿಸಿಕೆಗಳನ್ನು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

You may also like

Leave a Comment