Home » ಸ್ವಿಚ್ ಬೋರ್ಡ್ ಗೆ ಕೈ ಹಾಕಿ 11 ತಿಂಗಳ ಮಗು ದುರಂತ ಸಾವು | ಪೋಷಕರೇ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ !!

ಸ್ವಿಚ್ ಬೋರ್ಡ್ ಗೆ ಕೈ ಹಾಕಿ 11 ತಿಂಗಳ ಮಗು ದುರಂತ ಸಾವು | ಪೋಷಕರೇ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ !!

0 comments

ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಕಾರಣ ವಿದ್ಯುತ್ ಸ್ಪರ್ಶಿಸಿ 11 ತಿಂಗಳ ಗಂಡು ಮಗು ಸಾವನ್ನಪ್ಪಿದ್ದು, ಮಗುವನ್ನು ರಕ್ಷಿಸಲು ಹೋದ ತಾಯಿ ಅಸ್ವಸ್ಥಗೊಂಡಿರುವ ಘಟನೆ ಚಾಮರಾಜನಗರದ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ.

ರಂಗಸ್ವಾಮಿ ಹಾಗೂ ಲಕ್ಷ್ಮಿ ದಂಪತಿಯ 11 ತಿಂಗಳ ಗಗನ್ ಮೃತಪಟ್ಟ ಮಗು. ಇಂದಿನಂತೆ ಸ್ನಾನಮಾಡಿಸಿ ಮಲಗಿಸಿದ್ದ ಮಗು ಎಚ್ಚರಗೊಂಡು ನೆಲಕ್ಕೆ ಸಮೀಪವಿರುವ ಸ್ವಿಚ್ ಬೋರ್ಡ್ ಗೆ ಆಟವಾಡುತ್ತಾ ಕೈ ಹಾಕಿದೆ. ಮಗುವಿನ ಕಿರುಚಾಟ ಕೇಳಿ ರಕ್ಷಿಸಲು ಹೋದ ತಾಯಿ ಲಕ್ಷ್ಮೀ ಕೂಡಾ ವಿದ್ಯುತ್ ಶಾಕ್‍ನಿಂದ ಅಸ್ವಸ್ಥಗೊಂಡಿದ್ದಾರೆ.

ಇಬ್ಬರನ್ನು ತಕ್ಷಣ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಲಕ್ಷ್ಮಿ ತನ್ನ ಸಹೋದರಿ ಮಗುವಿನ ಹುಟ್ಟುಹಬ್ಬದ ಆಚರಣೆಯ ಸಲುವಾಗಿ ತನ್ನ ಮಗುವಿನೊಂದಿಗೆ ತವರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

You may also like

Leave a Comment