Home » Bagmati Express Accident: ಚೆನ್ನೈನಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಮೈಸೂರು ದರ್ಭಾಂಗ್‌ ಎಕ್ಸ್‌ಪ್ರೆಸ್‌; ಬೋಗಿಗಳಿಗೆ ಬೆಂಕಿ; ಹಲವರು ಗಾಯಗೊಂಡಿರುವ ಶಂಕೆ

Bagmati Express Accident: ಚೆನ್ನೈನಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಮೈಸೂರು ದರ್ಭಾಂಗ್‌ ಎಕ್ಸ್‌ಪ್ರೆಸ್‌; ಬೋಗಿಗಳಿಗೆ ಬೆಂಕಿ; ಹಲವರು ಗಾಯಗೊಂಡಿರುವ ಶಂಕೆ

2 comments

Bagmati Express Accident: ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ಭಾರಿ ರೈಲು ಅಪಘಾತದ ಸುದ್ದಿಯೊಂದು ಹೊರಬಂದಿದೆ. ಮೈಸೂರಿನಿಂದ ದರ್ಭಾಂಗಕ್ಕೆ ಹೋಗುತ್ತಿದ್ದ ಬಾಗ್ಮತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ರೈಲಿಗೆ ಬೆಂಕಿ ಹೊತ್ತಿಕೊಂಡ ಸುದ್ದಿಯೂ ಇದೆ.

ತಮಿಳುನಾಡಿನ ಕಾವರಪೆಟ್ಟೈ ಎಂಬಲ್ಲಿ ನಿಂತಿದ್ದ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ರೈಲ್ವೇ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿರುವ ಆತಂಕವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.

ರಕ್ಷಣಾ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ಪೊಲೀಸರು ಸಂಸ್ಥೆಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸದ್ಯಕ್ಕೆ ನಿರೀಕ್ಷಿಸಲಾಗುತ್ತಿದೆ.

ಮಾಹಿತಿ ಪ್ರಕಾರ, ಅಪಘಾತದಲ್ಲಿ ಮೈಸೂರಿನಿಂದ ದರ್ಭಾಂಗಕ್ಕೆ ಬರುತ್ತಿದ್ದ ಬಾಗ್ಮತಿ ಸೂಪರ್‌ಫಾಸ್ಟ್ ಪೆರಂಬೂರ್‌ನಿಂದ ಹೊರಟ 10 ನಿಮಿಷಗಳ ನಂತರ ಹಳಿತಪ್ಪಿದೆ. ಹಿಂಬದಿಯ 3 ಬೋಗಿಗಳು ಸಂಪೂರ್ಣ ಹಾಳಾಗಿದ್ದು, ಕೋಚ್ ಕೂಡ ಹಳಿ ತಪ್ಪಿದೆ.

 

You may also like

Leave a Comment