Home News ಬಳಂಜ: ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಗಣರಾಜ್ಯೋತ್ಸವ ವಾರ್ಷಿಕ ಕ್ರೀಡಾಕೂಟ; ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಂಜ: ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಗಣರಾಜ್ಯೋತ್ಸವ ವಾರ್ಷಿಕ ಕ್ರೀಡಾಕೂಟ; ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

ಬಳಂಜ: ಜನವರಿ 26ನೇ ಸೋಮವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆಯಲ್ಲಿನಡೆಯುವ ಗಣರಾಜ್ಯೋತ್ಸವ ವಾರ್ಷಿಕ ಕ್ರೀಡಾಕೂಟ, ಸಾಂಸ್ಕೃತಿಕ, ಹಾಗೂ ನಾಟಕ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಮ್ಮೆಲ್ಲರ ಮಾರ್ಗದರ್ಶಕರು, ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಶ್ರೀಯು ದರ್ಣಪ್ಪ ಪೂಜಾರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಸರ್ವೋದಯ ಫ್ರೆಂಡ್ಸ್ ಹಲವಾರು ವರ್ಷಗಳಿಂದ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡ್ತಾ ಬರುತ್ತಿದೆ, ಮುಂದೆಯೂ ಕೂಡ ಒಳ್ಳೆ ಕೆಲಸ ಮಾಡುವ ಶಕ್ತಿಯನ್ನು ದೇವರು ನೀಡಲಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಎಂದು ಶುಭ ಹಾರೈಸಿದರು.

ಹಾಗೆ ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸುದ್ದಿ ವಾರಪತ್ರಿಕೆಯ ವರದಿಗಾರರು ಶ್ರೀಯುತ ಸದಾನಂದ ಸಾಲಿಯಾನ್, ಎಚ್ ಧರ್ಣಪ್ಪ ಪೂಜಾರಿ ಅವರನ್ನು ಹೂ ನೀಡಿ ಶಾಲು ಹಾಕಿ ಗೌರವಿಸಿದರು, ಈ ಸಂದರ್ಭದಲ್ಲಿ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಸರ್ವ ಸದಸ್ಯರು ಉಪಸ್ಥಿತರಿದ್ದರು