Home » Nandamuri Balakrishna : ಭಾಷಣದ ಮಾಡುವಾಗ ಫ್ಯಾನ್ಸ್ ಎದುರು ಉದುರಿತು ಬಾಲಯ್ಯನ ಮೀಸೆ – ವಿಡಿಯೋ ವೈರಲ್, ಬಾಲಯ್ಯ ಟ್ರೋಲ್!!

Nandamuri Balakrishna : ಭಾಷಣದ ಮಾಡುವಾಗ ಫ್ಯಾನ್ಸ್ ಎದುರು ಉದುರಿತು ಬಾಲಯ್ಯನ ಮೀಸೆ – ವಿಡಿಯೋ ವೈರಲ್, ಬಾಲಯ್ಯ ಟ್ರೋಲ್!!

by V R
0 comments

Nandamuri Balakrishna : ಅನೇಕ ಸಿನಿಮಾ ನಾಯಕರು ವಿಗ್ ಧರಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅನೇಕ ನಟರು ನಿಜ ಜೀವನದಲ್ಲೂ ವಿಗ್ ಧರಿಸುತ್ತಾರೆ. ಆದರೆ ಮೀಸೆಯನ್ನು ಕೂಡ ಕೃತಕವಾಗಿ ಹಾಕಿಕೊಳ್ಳುವುದನ್ನು ನೋಡಿದ್ದೀರಾ? ಸದ್ಯ ಇದೀಗ ತಮಿಳು ನಟ ಬಾಲಯ್ಯ ಅವರು ಈ ವಿಚಾರವಾಗಿ ಟ್ರೋಲ್ ಆಗುತ್ತಿದ್ದಾರೆ.

ಹೌದು, ನಂದಮೂರಿ ಬಾಲಕೃಷ್ಣ ಅವರ ಮೀಸೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ನಡೆದ ಸಂಗತಿ ಏನೆಂದರೆ ನಂದಮೂರಿ ಬಾಲಕೃಷ್ಣ ಇತ್ತೀಚೆಗೆ ತಮ್ಮ 65 ನೇ ಹುಟ್ಟುಹಬ್ಬವನ್ನು (ಜೂನ್ 10) ಬಸವತಾರಕಂ ಆಸ್ಪತ್ರೆಯಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿದರು. ಗಾಳಿಯಲ್ಲಿ ಚಾಕು ಬೀಸುತ್ತಾ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನಂತರ, ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಬಾಲಯ್ಯ ಮಾತನಾಡುತ್ತಿರುವಾ ಅವರ ಮೀಸೆ ಸ್ವಲ್ಪ ಜಾರಿ ಕೆಳಗೆ ಬಂದಿತ್ತು. ಇದರಿಂದ ಸ್ವಲ್ಪ ಶಾಕ್‌ ಆದ ಬಾಲಯ್ಯ ತಕ್ಷಣ ಸಿಬ್ಬಂದಿಗೆ ಗಮ್ ಕೊಡುವಂತೆ ಕೂಗಿದರು. ಗಮ್ ನೀಡಿದ ತಕ್ಷಣ ಅವರು ಹಿಂದೆ ತಿರುಗಿ, ಮೀಸೆ ಅಂಟಿಸಿಕೊಂಡು ಭಾಷಣ ಮುಂದುವರಿಸಿದರು. ಇದರ ವಿಡಿಯೋ ಈಗ ವೈರಲ್ ಆಗಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಯ್ಯ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು ಬಾಲಯ್ಯನ ಮೀಸೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಇದಕ್ಕೆ ಬಾಲಯ್ಯ ಅಭಿಮಾನಿಗಳು ಅಖಾಡಕ್ಕೆ ಇಳಿದು ತಿರುಗೇಟು ಕೊಡುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳ ಮಧ್ಯೆ ಮಾತಿನ ಯುದ್ಧವೇ ನಡೆಯುತ್ತಿದೆ.

You may also like