Home » Bangalore: ಜನರ ಮೇಲೆ ಬಿದ್ದ 100 ಅಡಿ ಎತ್ತರದ ರಥ!

Bangalore: ಜನರ ಮೇಲೆ ಬಿದ್ದ 100 ಅಡಿ ಎತ್ತರದ ರಥ!

0 comments

Bangalore: ಬೆಂಗಳೂರಿನ ಗ್ರಾಮೀಣ ಪ್ರದೇಶದ ಆನೇಕಲ್‌ನಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ನೂರು ಅಡಿ ಎತ್ತರದ ರಥವು ಬಿದ್ದಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಓರ್ವ ಮೃತ ಪಟ್ಟಿದ್ದಾನೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಶನಿವಾರ ಸಂಜೆ ಮದ್ದೂರಮ್ಮ ಜಾತ್ರೆಗೆ ರಥವನ್ನು ಎಳೆದುಕೊಂಡು ಹೋಗುವಾಗ ಈ ದುರಂತ ನಡೆದಿದೆ. ಈ ಘಟನೆಯಲ್ಲಿ ತಮಿಳುನಾಡಿನ ಹೊಸೂರಿನ ನಿವಾಸಿಯೋರ್ವರು ಸಾವಿಗೀಡಾಗಿದ್ದಾರೆ. ಇನ್ನೋರ್ವರಿಗೆ ಗಂಭೀರ ಗಾಯವಾಗಿದೆ. ಉಳಿದಂತೆ ಕೆಲವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಅವರು ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್‌ ತಾಲೂಕಿನಲ್ಲಿ ನಡೆಯುವ ರಥೋತ್ಸವದ ವೇಳೆ ಅತಿ ಹೆಚ್ಚು ರಥವನ್ನು ನಿರ್ಮಿಸಿ ಮದ್ದೂರಮ್ಮ ದೇವಸ್ಥಾನಕ್ಕೆ ಅರ್ಪಣೆ ಮಾಡುತ್ತಾರೆ. ಕಳೆದ ವರ್ಷ ಇದೇ ರೀತಿ ರಥ ಮುರಿದು ಬಿದ್ದಿತ್ತು. ಆದರೆ ಯಾವುದೇ ಸಾವು ಸಂಭವಿಸಿರಲಿಲ್ಲ.

You may also like