Home » Bangalore: ಬಿಗ್‌ಬಾಸ್‌ 11ರ ಸ್ಪರ್ಧಿ ರಂಜಿತ್‌ ವಿರುದ್ಧ ದೂರು ದಾಖಲು

Bangalore: ಬಿಗ್‌ಬಾಸ್‌ 11ರ ಸ್ಪರ್ಧಿ ರಂಜಿತ್‌ ವಿರುದ್ಧ ದೂರು ದಾಖಲು

0 comments

Bangalore: ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿಗ್‌ಬಾಸ್‌ 11 ರ ಸ್ಪರ್ಧಿ ರಂಜಿತ್‌ ವಿರುದ್ಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಗದೀಶ್‌ ಅವರು ಈ ದೂರನ್ನು ನೀಡಿದ್ದು, ಪೊಲೀಸರು ಎನ್‌ಸಿಆರ್‌ ದಾಖಲು ಮಾಡಿದ್ದಾರೆ.

ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ಜಗದೀಶ್‌ ಕುಟುಂಬ ವಾಸವಾಗಿದ್ದು, ಈ ಫ್ಲ್ಯಾಟ್‌ನಲ್ಲಿಯೇ ಅಕ್ಕ ಬಾವನ ಜೊತೆ ವಾಸವಿದ್ದರು. ಈ ಮನೆ ನನ್ನದು ಎಂದು ಅಕ್ಕ ತಮ್ಮನ ನಡುವೆ ಗಲಾಟೆ ಆಗಿದೆ.

ರಂಜಿತ್‌ ಪತ್ನಿ ಜೊತೆ ರಂಜಿತ್‌ ಅಕ್ಕ ಗಲಾಟೆ ಮಾಡಿದ್ದಾರೆ. ಮನೆ ಬಿಟ್ಟು ಹೋಗದೇ ಈ ಮನೆ ನನ್ನದು ಎಂದು ರಂಜಿತ್‌ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್‌ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಂಜಿತ್‌ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಕೋರ್ಟ್‌ನಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

 

You may also like