Home » Bangalore Express Highway Accident: ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೇ ಭೀಕರ ಅವಘಡ – ಮೂವರ ಸ್ಪಾಟ್ ಡೆತ್ !

Bangalore Express Highway Accident: ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೇ ಭೀಕರ ಅವಘಡ – ಮೂವರ ಸ್ಪಾಟ್ ಡೆತ್ !

0 comments
Bangalore Express Highway Accident

Bangalore Express Highway Accident: ಬೆಂಗಳೂರು -ಮೈಸೂರು ಎಕ್ಸ್​​​ಪ್ರೆಸ್​ವೇಯಲ್ಲಿ (Bengaluru -Mysuru Expressway) ಭೀಕರ ಅವಘಡ ಸಂಭವಿಸಿದೆ. ಇಲ್ಲಿನ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ದ್ವಿಚಕ್ರ ವಾಹನ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ (Accident) ಸಂಭವಿಸಿದ್ದು, ಇದರ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ (death).

ಬೆಂಗಳೂರಿನಿಂದ (Bengaluru) ಮೈಸೂರಿಗೆ (mysore) ಒಂದೇ ಬೈಕ್​ನಲ್ಲಿ ಮೂವರು ಹೋಗುತ್ತಿದ್ದರು. ಇವರು ರಾಮನಗರದ ಜಯಪುರ ಗೇಟ್ ಬಳಿ ಸಂಚರಿಸುತ್ತಿರುವ ವೇಳೆ ಕೆಟ್ಟು ನಿಂತಿದ್ದ ಕಾರಿಗೆ (car) ಡಿಕ್ಕಿ (Bangalore Express Highway Accident) ಹೊಡೆದಿದ್ದಾರೆ. ಘಟನೆ ಪರಿಣಾಮ ಮೂವರು ಹೆದ್ದಾರಿಗೆ ಬಿದ್ದಿದ್ದು, ಈ ವೇಳೆ ಇದೇ ದಾರಿಯಾಗಿ ಬಂದ ಮತ್ತೊಂದು ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕಾಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಮೊದಲಿನದಲ್ಲ ಈ ಹಿಂದೆಯೂ ಸಾಕಷ್ಟು ಅಪಘಾತಗಳು ಈ ಬೆಂಗಳೂರು -ಮೈಸೂರು ಎಕ್ಸ್​​​ಪ್ರೆಸ್​ವೇಯಲ್ಲಿ ಸಂಭವಿಸಿದೆ. ಈ ಸ್ಥಳದಲ್ಲಿ ಒಂದಲ್ಲ ಒಂದು ಅಪಘಾತ ನಡೆಯುತ್ತಲೇ ಇರುತ್ತವೆ.

ಸೆಪ್ಟೆಂಬರ್‌ 2022 ಮೊದಲ ವಾರದಿಂದ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರಕ್ಕೆ ಪ್ರಾರಂಭವಾಗಿ ಎರಡು ತಿಂಗಳು ಆಗುವುದೊರಳಗೆ 40 ಅಪಘಾತಗಳು ಸಂಭವಿಸಿದೆ. ಸ್ಥಳದಲ್ಲೇ 13 ಮಂದಿ ಮೃತಪಟ್ಟರೆ, 33 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ರಾಮನಗರದಿಂದ ಚನ್ನಪಟ್ಟಣದ ಬೈರಾಪಟ್ಟಣದವರೆಗೂ ಬೈಪಾಸ್‌ ನಿರ್ಮಿಸಿದ್ದು ಸರಿಯಾದ ಎಂಟ್ರಿ ಹಾಗೂ ಎಕ್ಸಿಟ್‌ ಗಳನ್ನು ನೀಡದಿರುವುದರಿಂದ ಓವರ್‌ಸ್ಪೀಡ್‌ ಸಾಮಾನ್ಯವಾಗಿದೆ. ಹೀಗಾಗಿ ರಾಮನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಬೈಪಾಸ್‌ನಲ್ಲಿಯೇ ಈ ಮೊದಲು ಆರು ಮಂದಿ ಮೃತಪಟ್ಟಿದ್ದು, 8ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.

 

ಇದನ್ನು ಓದಿ: Migraine symptoms in women: ಮಹಿಳೆಯರಲ್ಲಿ ಹೆಚ್ಚಾಗುವ ಒತ್ತಡವು ಮೈಗ್ರೇನ್‌ಗೆ ಕಾರಣವಾಗಬಹುದು? ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

You may also like

Leave a Comment