Home » Bangalore: ರಾಜ್ಯಕ್ಕೇ ಸಿಹಿ ಸುದ್ದಿ ಕೊಟ್ಟ ಬ್ಲಾಕ್ ಮೇಲ್ ತಂಡದ ಸುಲಿಗೆ ಪ್ರಕರಣ, ಇದಕ್ಕೂ ರಾಜ್‌ ನ್ಯೂಸ್‌ಗೂ ಸಂಬಂಧವಿಲ್ಲ!

Bangalore: ರಾಜ್ಯಕ್ಕೇ ಸಿಹಿ ಸುದ್ದಿ ಕೊಟ್ಟ ಬ್ಲಾಕ್ ಮೇಲ್ ತಂಡದ ಸುಲಿಗೆ ಪ್ರಕರಣ, ಇದಕ್ಕೂ ರಾಜ್‌ ನ್ಯೂಸ್‌ಗೂ ಸಂಬಂಧವಿಲ್ಲ!

0 comments
Bangalore

Bangalore: ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿರುವ ಆರೋಪಿ ವೆಂಕಟೇಶ್ ಹಾಗೂ ಇತರ ಆರೋಪಿಗಳಿಗೂ ರಾಜ್ ನ್ಯೂಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್‌ ನ್ಯೂಸ್ ನ ಪ್ರವರ್ತಕ ಸಂಸ್ಥೆ ಶಿವಶ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸ್ಪಷ್ಟೀಕರಣ ನೀಡಿದೆ. ರಾಜಾನುಕುಂಟೆ ವೆಂಕಟೇಶ್ ಎಂಬಾತ ನಮ್ಮ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ಸಂಸ್ಥೆಯ ಸಿಇಒ ಹಾಗೂ ಉದ್ಯೋಗಿಯಲ್ಲ. ಅವರು ಸಿಇಒ ಎಂದು ಹೇಳಿಕೊಂಡಿರುವುದಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

V Somanna-Dr Manjunath: ಅಡ್ವಾಣಿ ತೀರಿದರೆಂದು ಶ್ರದ್ಧಾಂಜಲಿ ಸಲ್ಲಿಸಿ ಪೇಚಿಗೆ ಸಿಲುಕಿದ ಸಚಿವ ವಿ ಸೋಮಣ್ಣ ಮತ್ತು ಡಾ ಮಂಜುನಾಥ್ !!

ಪಾಲಿಕೆ ಅಧಿಕಾರಿಗಳಿಗೂ ಟ್ರ್ಯಾಪ್ ರಾಜ್‌ ನ್ಯೂಸ್ ಸಿಇಒ ಎಂದು ಹೇಳಿಕೊಂಡಿದ್ದ ವೆಂಕಟೇಶ್

ದಿವ್ಯಾ ವಸಂತ ಅವರು ತಮ್ಮದೇ ಸುಲಿಗೆ ತಂಡವೊಂದನ್ನು ಕಟ್ಟಿಕೊಂಡಿದ್ದರು. ನಗರದ ಹಲವು ಮಸಾಜ್ ಪಾರ್ಲರ್ ಗಳನ್ನು ಟಾರ್ಗೆಟ್ ಮಾಡಿ ಸುಲಿಗೆಗಿಳಿದಿದ್ದರು. ವ್ಯವಸ್ಥಿತ ಸಂಚು ರೂಪಿಸಿ ಮಸಾಜ್ ಪಾರ್ಲರ್ ಗೆ ತಂಡದ ಸದಸ್ಯನೊಬ್ಬ ಹೋಗುತ್ತಿದ್ದ. ಮಹಿಳಾ ಥೆರಪಿಸ್ಟ್ ಜತೆಗಿರುವ ಖಾಸಗಿ ವಿಡಿಯೊ ರೆಕಾರ್ಡ್ ಮಾಡಿಕೊಂಡು ಬರುತ್ತಿದ್ದ. ಬಳಿಕ ವೆಂಕಟೇಶ್, ಪಾರ್ಲರ್ ಮ್ಯಾನೇಜರ್ ಹಾಗೂ ಮಾಲೀಕರಿಗೆ ಖಾಸಗಿ ವಿಡಿಯೋ ತೋರಿಸಿ ಹಣ ಸುಲಿಗೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಬಿಬಿಎಂಪಿಯ ಕೆಲ ಅಧಿ ಕಾರಿಗಳು ಹಾಗೂ ವೈದ್ಯರಿಗೂ ಬ್ಲಾಕ್‌ಮೇಲ್ ಮಾಡಿ ಹಣ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Channapattana By Election: ಸಿ ಪಿ ಯೋಗೇಶ್ವರ್ ಪಕ್ಷೇತರ ಸ್ಪರ್ಧೆ ?!

You may also like

Leave a Comment