Home » New Guidelines For Dog Care: ಮನೆಯಲ್ಲಿ ನಾಯಿ ಸಾಕುವವರಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಹೊಸ ಆದೇಶ

New Guidelines For Dog Care: ಮನೆಯಲ್ಲಿ ನಾಯಿ ಸಾಕುವವರಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಹೊಸ ಆದೇಶ

1 comment
New Guidelines For Dog Care

New Guidelines For Dog Care: ಬೆಂಗಳೂರಿನಲ್ಲಿ ನಾಯಿಗಳನ್ನು ಬೇಕಾಬಿಟ್ಟಿ ಸಾಕುತ್ತಿರುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ನಾಯಿಗಳನ್ನು ಬೇಕಾಬಿಟ್ಟಿ ಸಾಕುತ್ತಿರುವ ಹಿನ್ನೆಲೆ ಇದರಿಂದ ಉಳಿದವರಿಗೂ ಸಮಸ್ಯೆ ಉಂಟಾಗುತ್ತಿದೆ. ಹಲವರು ರಸ್ತೆ ಬದಿಯಲ್ಲಿ ನಾಯಿಗಳ ಮಲ-ಮೂತ್ರ ಮಾಡಿಸುವುದರಿಂದ ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದಾಗಿ ನಗರದ ಸೌಂದರ್ಯವೂ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ವಾನ ಸಾಕಣೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಪಶು ಸಂಗೋಪನೆ ವಿಭಾಗ ಪ್ರತ್ಯೇಕ ಮಾರ್ಗಸೂಚಿ ಜಾರಿಗೆ(New Guidelines For Dog Care Takers In Bengaluru By Bbmp Soon)ತಂದು ಅನುಷ್ಠಾನಕ್ಕೆ ತರಲು ಮುಂದಾಗಿದೆ.

ಸಾಕು ನಾಯಿಗಳಿಗಾಗಿ ಪ್ರಮುಖ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು(New Guidelines For Dog Care) ಜಾರಿಗೆ ತರುವ ಚಿಂತನೆ ನಡೆಯುತ್ತಿದೆ. ಇದರಿಂದ ಶ್ವಾನಗಳಿಗೂ ಮತ್ತು ಅವುಗಳ ಮಾಲೀಕರಿಗೂ ಪ್ರಯೋಜನವಾಗಲಿದೆ. ಬೀದಿ ನಾಯಿಗಳನ್ನು ದತ್ತು ಪಡೆಯುವ (Dog Adoption)ಯೋಜನೆ ಜಾರಿಗೆ ತರುವ ಉದ್ದೇಶ ಒಳಗೊಂಡಿದ್ದು, ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧ ಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಇದನ್ನು ಜಾರಿಗೆ ತರಲಾಗುತ್ತದೆ. ಒಂದು ಕುಟುಂಬದಲ್ಲಿ ಗರಿಷ್ಠ ಎಷ್ಟು ಶ್ವಾನಗಳನ್ನು ಸಾಕಬಹುದು ? ಮಲ-ಮೂತ್ರ ವಿಸರ್ಜನೆಗೆ ಶ್ವಾನವನ್ನು ಎಷ್ಟು ಗಂಟೆಗೆ ಮನೆಯಿಂದ ಹೊರಗೆ ಒಯ್ಯಬೇಕು. ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದ ರೀತಿಯಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಇತ್ಯಾದಿ ಅಂಶಗಳನ್ನು ಮಾರ್ಗ ಸೂಚಿಯಲ್ಲಿ ಸೂಚಿಸಲಾಗುತ್ತದೆ.

ಬೆಂಗಳೂರು ನಗರದಲ್ಲಿ ಈ ಹಿಂದೆ 3.10 ಲಕ್ಷ ಬೀದಿ ನಾಯಿಗಳ ಸಂಖ್ಯೆ ಇಳಿಕೆ ಕಂಡು ಸದ್ಯ 2,79,335 ಶ್ವಾನಗಳಿವೆ. ಈ ಪೈಕಿ 1,65,341 ಗಂಡು ನಾಯಿಗಳು ಹಾಗೂ 82,757 ಹೆಣ್ಣು ನಾಯಿಗಳಿವೆ ಎನ್ನಲಾಗಿದೆ. ಪಾಲಿಕೆಯು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 77,555 ಶ್ವಾನಗಳಿಗೆ ಆ್ಯಂಟಿ ರೇಬಿಸ್‌ ವ್ಯಾಕ್ಸಿನೇಷನ್‌ (ಎಆರ್‌ವಿ) ಹಾಕಿಸಲಾಗಿದೆ. ಇವುಗಳಲ್ಲಿ ಶೇ.70ರಷ್ಟು ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

 

ಇದನ್ನು ಓದಿ: Death News: ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ; ತುಳು ಲಿಪಿಯ ಪಂಚಾಂಗ ಕರ್ತೃ, ಶತಾಯುಷಿ ವಿದ್ವಾನ್ ಅಂಗಡಿ ಮಾರು ಕೃಷ್ಣಭಟ್ಟರು ಅಸ್ತಂಗತ

You may also like

Leave a Comment