Home » ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದ ಈ ಘಟನೆ | 70 ವರ್ಷದ ವೃದ್ಧರೊಬ್ಬರನ್ನು ಕೈಕಾಲು ಕಟ್ಟಿ, ಕತ್ತು ಹಿಸುಕಿ ಹತ್ಯೆ!

ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದ ಈ ಘಟನೆ | 70 ವರ್ಷದ ವೃದ್ಧರೊಬ್ಬರನ್ನು ಕೈಕಾಲು ಕಟ್ಟಿ, ಕತ್ತು ಹಿಸುಕಿ ಹತ್ಯೆ!

0 comments

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕೊಲೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ಮತ್ತೊಮ್ಮೆ, ಶಾಸಕರ ಕಚೇರಿ ಸಮೀಪದಲ್ಲಿಯೇ ವೃದ್ಧನೊಬ್ಬನನ್ನು ಹತ್ಯೆ ಮಾಡಲಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ಕೊಲೆಯಾದಂತ ವೃದ್ಧರನ್ನು ದೀಪಂ ಎಲೆಕ್ಟ್ರಿಕಲ್ಸ್ ಮಾಲೀಕ ಜುಗ್ಗು ರಾವ್ ಜೈನ್ ಎಂಬುದಾಗಿ ಗುರುತಿಸಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯ ನಾಲ್ಕನೇ ಕ್ರಾಸ್ ನಲ್ಲಿರುವಂತ ಕಿಂಗ್ಸ್ ಎನ್ ಕ್ಲೇವ್ ಅಪಾರ್ಮೆಂಟ್ ಬಳಿಯಲ್ಲಿ 70 ವರ್ಷದ ವೃದ್ಧರೊಬ್ಬರನ್ನು ಕೊಲೆ ಮಾಡಲಾಗಿದೆ. ಶಾಸಕರ ಕಚೇರಿಯ ಪಕ್ಕದಲ್ಲೇ ಇದ್ದಂತ ಈ ಅಪಾರ್ಟ್ ಮೆಂಟ್ ನಲ್ಲಿ ಜಗ್ಗುರಾಜ್ ಜೈನ್ ಅವರು ನಾಲ್ಕು ವರ್ಷದಿಂದ ವಾಸವಿದ್ದರು. ಅವರನ್ನು ಕೈಕಾಲು ಕಟ್ಟಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಅಲ್ಲದೇ ಮನೆಯಲ್ಲಿದ್ದಂತ ಚಿನ್ನಾಭರಣ, ನಗದು ದೋಚಲಾಗಿದೆ.

ಈ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

You may also like

Leave a Comment