Bank Cheque Clearance: ಗ್ರಾಹಕರು ನೀಡಿದ ಚೆಕ್ ಇನ್ನು ಮುಂದೆ ಕೆಲವೇ ಗಂಟೆಗಳಲ್ಲಿ ಖಾತೆಗೆ ಹಣ ಪಾವತಿ ಆಗಲಿದೆ. ಈ ಕುರಿತು ಆರ್‌ಬಿಐ ಬ್ಯಾಂಕಿಂಗ್ ವ್ಯವಸ್ಥೆಯನ್ನು ಭಾರೀ ಬದಲಾವಣೆಯನ್ನು ಮಾಡಿದೆ.
ಎರಡು ಹಂತದಲ್ಲಿ ಈ ಬದಲಾವಣೆ ಜಾರಿಗೆ ಬರಲಿದೆ. ಮೊದಲ ಹಂತ ಅಕ್ಟೋಬರ್ 4 ರಿಂದಲೇ ಜಾರಿಗೆ ಬರಲಿದ್ದು, ಸಂಜೆ 7 ಗಂಟೆಯೊಳಗೆ ಚೆಕ್ ಅನ್ನು ಸಂಬಂಧಪಟ್ಟ ಬ್ಯಾಂಕ್‌ಗಳು ಕ್ಲಿಯರ್ ಮಾಡಬೇಕು. ತಪ್ಪಿದ್ದಲ್ಲಿ ಆ ಚೆಕ್‌ಗಳು ಸ್ವಯಂ ಸ್ವೀಕೃತವಾಗಿ ಹಣ ಪಾವತಿಯಾಗಲಿದೆ.
ಎರಡನೆ ಹಂತವು ಜನವರಿ 3 ರಿಂದ ಜಾರಿಗೆ ಬರಲಿದೆ. ಮೂರು ಗಂಟೆಯೊಳಗೆ ಚೆಕ್‌ಗಳನ್ನು ಸಂಬಂಧಿಸಿದ ಬ್ಯಾಂಕ್‌ಗಳು ಸ್ವೀಕೃತ ಅಥವಾ ತಿರಸ್ಕೃತ ಎಂದು ಖಚಿತ ಮಾಡಬೇಕಿದೆ.
ಪ್ರಸ್ತುತ ಬ್ಯಾಂಕಿಂಗ್ ನೆಟ್‌ವರ್ಕ್‌ಗಳು ಚೆಕ್ ಟ್ರಂಕೇಷನ್ ಸಿಸ್ಟಂ ಮೂಲಕ ಸಂಬಂಧಪಟ್ಟ ಬ್ಯಾಂಕುಗಳಿಗೆ ಚೆಕ್‌ಗಳನ್ನು ಸ್ಕ್ಯಾನ್ ಮಾಡಿ ಕಳಿಸಿಕೊಡುತ್ತೇವೆ. ಬೆಳಗಿನ ಬ್ಯಾಚ್, ಮಧ್ಯಾಹ್ನ ಮತ್ತು ಸಂಜೆ ಬ್ಯಾಚ್ ಹೀಗೆ ಹಂತ ಹಂತವಾಗಿ ಚೆಕ್‌ಗಳನ್ನು ಗ್ರಾಹಕರು ಯಾವ ಬ್ಯಾಂಕ್‌ಗೆ ನೀಡಿದ್ದಾರೋ ಆ ಬ್ಯಾಂಕ್‌ಗೆ ಕಳಿಸಿಕೊಡುತ್ತಾರೆ. ಇದು ವಿಳಂಬವಾಗುತ್ತಿತ್ತು. ಇದನ್ನು ನಿವಾರಣೆ ಮಾಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.
