ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಕಡೆಯಿಂದ ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಕುರಿತು ಮಾಹಿತಿ ಹೊರಬಿದ್ದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 2022 ರಲ್ಲಿ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯ ಪ್ರಕಾರ ಜೂನ್ 2022 ರಲ್ಲಿ ಎಂಟು ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ.
ಜೂನ್ ತಿಂಗಳಲ್ಲಿ ದೇಶದಾದ್ಯಂತ ಜನರು ಮಹಾರಾಣಾ ಪ್ರತಾಪ್ ಜಯಂತಿ, ಗುರು ಜಯಂತಿ ಹರಗೋಬಿಂದ್ ಅವರ ಜನ್ಮದಿನವಾದ ರಾಜ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಎಲ್ಲಾ ರಾಜ್ಯಗಳು ಈ ಹಬ್ಬಗಳು ಮತ್ತು ವಿಶೇಷ ದಿನಗಳನ್ನು ಆಚರಣೆ ಮಾಡಲ್ಲ. ಆದ್ದರಿಂದ ಈ ರಜೆಗಳು ಎಲ್ಲಾ ರಾಜ್ಯಗಳಲ್ಲಿ ಇರಲಾರದು. ಆದರೂ ನೀವು ರಜೆ ಇದ್ದ ದಿನ ಬ್ಯಾಂಕ್‌ಗೆ ಹೋಗಿ ಸಮಯ ವ್ಯರ್ಥ ಮಾಡುವ ಮುನ್ನ ರಜೆ ದಿನಗಳ ಬಗ್ಗೆ ತಿಳಿದುಕೊಳ್ಳಿ. ಆದಾಗ್ಯೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ದೇಶಾದ್ಯಂತ ಲಭ್ಯವಿರುತ್ತವೆ.
ರಜಾ ಪಟ್ಟಿ ಇಂತಿದೆ:
ಜೂನ್ 2: ಮಹಾರಾಣಾ ಪ್ರತಾಪ್ ಜಯಂತಿ, ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಇತರ ಪ್ರದೇಶಗಳಲ್ಲಿ ಬ್ಯಾಂಕ್ ರಜೆ
ಜೂನ್ 5: ತಿಂಗಳ ಮೊದಲ ಭಾನುವಾರ (ವಾರದ ರಜೆ)
ಜೂನ್ 11: ತಿಂಗಳ ಎರಡನೇ ಶನಿವಾರ
ಜೂನ್ 12: ತಿಂಗಳ ಎರಡನೇ ಭಾನುವಾರ (ವಾರದ ರಜೆ)
