Home » Bank Holidays In Sept | ಸೆಪ್ಟೆಂಬರ್ ತಿಂಗಳಲ್ಲಿ ಇದೆ ಬ್ಯಾಂಕಿಗೆ ಸಾಲು ಸಾಲು ರಜೆ, ಗ್ರಾಹಕರೇ ಗಮನಿಸಿ

Bank Holidays In Sept | ಸೆಪ್ಟೆಂಬರ್ ತಿಂಗಳಲ್ಲಿ ಇದೆ ಬ್ಯಾಂಕಿಗೆ ಸಾಲು ಸಾಲು ರಜೆ, ಗ್ರಾಹಕರೇ ಗಮನಿಸಿ

0 comments

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾದಿನಗಳ ವೇಳಾಪಟ್ಟಿಯ ಪ್ರಕಾರ, 2022 ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಕಮ್ಮಿ ಅರ್ಧ ತಿಂಗಳು ರಜೆ ಇದೆ. ಸೆಪ್ಟೆಂಬರ್ ನಲ್ಲಿ ಬ್ಯಾಂಕುಗಳಿಗೆ 13 ದಿನಗಳು ರಜೆ ಇರಲಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಗಣೇಶ ಚತುರ್ಥಿ, ನವರಾತ್ರಿ ಸೇರಿದಂತೆ ಅನೇಕ ಹಬ್ಬಗಳ ಆಗಮನ ಆಗುತ್ತಿದೆ. ಅಲ್ಲದೆ ಆಯಾ ಪ್ರದೇಶದಲ್ಲಿ ಇನ್ನಿತರ ರಜೆಗಳು ಕಾಲಿಡಲಿವೆ. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ಅದಕ್ಕೂ ಮೊದಲು ಒಮ್ಮೆ ರಜಾದಿನಗಳ ಬಗ್ಗೆ ಮಾಹಿತಿಯನ್ನು ನೋಡಿ.

2022 ರ ಸೆಪ್ಟೆಂಬರ್ ತಿಂಗಳ ರಜಾದಿನಗಳ ಸಂಪೂರ್ಣ ಪಟ್ಟಿ:

ಸೆಪ್ಟೆಂಬರ್ 1, 2022 ಗಣೇಶ ಚತುರ್ಥಿ

ಸೆಪ್ಟೆಂಬರ್ 4, 2022 ಭಾನುವಾರ (ವಾರದ ರಜೆ)

ಸೆಪ್ಟೆಂಬರ್ 6, 2022 ಕರ್ಮ ಪೂಜೆ – ರಾಂಚಿಯಲ್ಲಿ ಬ್ಯಾಂಕುಗಳು ಮುಚ್ಚಿವೆ

ಸೆಪ್ಟೆಂಬರ್ 7, 2022 ಮೊದಲ ಓಣಂ – ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟವು

ಸೆಪ್ಟೆಂಬರ್ 8, 2022: ತಿರುವೋಣಂ – ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಿವೆ

ಸೆಪ್ಟೆಂಬರ್ 9, 2022 ಇಂದ್ರಜಾತ್ರಾ – ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕುಗಳು ಮುಚ್ಚಿವೆ

ಸೆಪ್ಟೆಂಬರ್ 10, 2022 ಶನಿವಾರ (ತಿಂಗಳ ಎರಡನೇ ಶನಿವಾರ)

ಸೆಪ್ಟೆಂಬರ್ 11, 2022 ಭಾನುವಾರ (ವಾರದ ರಜೆ)

ಸೆಪ್ಟೆಂಬರ್ 18, 2022 ಭಾನುವಾರ (ವಾರದ ರಜೆ)

ಸೆಪ್ಟೆಂಬರ್ 21, 2022 ಶ್ರೀ ನಾರಾಯಣ ಗುರು ಸಮಾಧಿ ದಿನ – ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಲಿವೆ

ಸೆಪ್ಟೆಂಬರ್ 24, 2022 ಶನಿವಾರ (ತಿಂಗಳ ನಾಲ್ಕನೇ ಶನಿವಾರ)

ಸೆಪ್ಟೆಂಬರ್ 25 2022 ಭಾನುವಾರ (ವಾರದ ರಜೆ)

ಸೆಪ್ಟೆಂಬರ್ 26, 2022 ನವರಾತ್ರಿ ಸ್ಥಾಪನೆ / ಹೌಬಾ ಇಂಫಾಲ್

ಆರ್ ಬಿಐ ಅಧಿಕೃತ ವೆಬ್ಸೈಟ್ನಲ್ಲಿ (ಬ್ಯಾಂಕ್ ಹಾಲಿಡೇಸ್ ಲಿಸ್ಟ್ 2022) ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿನ ವಿಶೇಷ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ. ಈ ಮೇಲ್ಕಂಡ ರಜ ದಿನಗಳನ್ನು ಗಮನಿಸಿಕೊಂಡು ನಿಮ್ಮ ಬ್ಯಾಂಕ್ ಕೆಲಸಗಳನ್ನು ಪೂರೈಸಿಕೊಳ್ಳಿ.

You may also like

Leave a Comment