Home » Bank Holiday : ತಿಂಗಳಾಂತ್ಯದಲ್ಲಿ ಸತತ 4 ದಿನ ಬ್ಯಾಂಕ್ ಬಂದ್!!

Bank Holiday : ತಿಂಗಳಾಂತ್ಯದಲ್ಲಿ ಸತತ 4 ದಿನ ಬ್ಯಾಂಕ್ ಬಂದ್!!

0 comments

 

Bank Holiday : ಜನವರಿ ತಿಂಗಳ ಅಂತ್ಯದಲ್ಲಿ ಸತತವಾಗಿ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇರಲಿದ್ದು ಗ್ರಾಹಕರು ಈ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಅಂದರೆ ತಮ್ಮ ವಹಿವಾಟುಗಳನ್ನು ಅರಿತುಕೊಂಡು ಮುಂಚಿತವಾಗಿಯೇ ನಡೆಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು, ವಾರದಲ್ಲಿ ಕೇವಲ ಐದು ದಿನಗಳ ಕೆಲಸದ ದಿನಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಜನವರಿ 27 ರಂದು ಮುಷ್ಕರ ನಡೆಸಲಿದೆ. ಈ ಬೇಡಿಕೆಯ ಹಿನ್ನೆಲೆಯಲ್ಲಿ, ಜನವರಿ 27 ರಂದು ಬೃಹತ್ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ಸಿದ್ಧತೆ ನಡೆಸುತ್ತಿವೆ. 

 ಜನವರಿ 24, ನಾಲ್ಕನೇ ಶನಿವಾರ ಈ ದಿನ ಬ್ಯಾಂಕಿಗೆ ರಜೆ ಇರಲಿದೆ. ಬಳಿಕ ಜನವರಿ 25 ರ ಭಾನುವಾರ ಬ್ಯಾಂಕುಗಳಿಗೆ ರಜೆ, ಮತ್ತು 26 ರಂದು ಗಣರಾಜ್ಯೋತ್ಸವ. ಆ ದಿನವೂ ಬ್ಯಾಂಕುಗಳು ಇರುವುದಿಲ್ಲ. 27 ರಂದು, ಬ್ಯಾಂಕ್ ನೌಕರರ ಸಂಘಗಳ ಮುಷ್ಕರದಿಂದಾಗಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರೊಂದಿಗೆ, ಬ್ಯಾಂಕುಗಳು ಸತತ 4 ದಿನಗಳವರೆಗೆ ಮುಚ್ಚಲ್ಪಡುತ್ತವೆ. 

ಆದಾಗ್ಯೂ, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ನಲ್ಲಿ ಒಟ್ಟು ಒಂಬತ್ತು ಪ್ರಮುಖ ಬ್ಯಾಂಕುಗಳಿವೆ. ಸರ್ಕಾರಿ ಬ್ಯಾಂಕುಗಳ ಜೊತೆಗೆ, ಖಾಸಗಿ ಬ್ಯಾಂಕುಗಳ ನೌಕರರು ಸಹ ಇದರಲ್ಲಿ ಸೇರಿದ್ದಾರೆ. ಇದರೊಂದಿಗೆ, ಜನವರಿ 27 ರಂದು ಮುಷ್ಕರದಿಂದಾಗಿ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳು ಮುಚ್ಚಲ್ಪಡುವ ಸಾಧ್ಯತೆಗಳಿವೆ.

You may also like