Home » Bantwal: ಬಂಟ್ವಾಳ ಯುವಕನ ಕೊಲೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ: ಎರಡು FIR ದಾಖಲು

Bantwal: ಬಂಟ್ವಾಳ ಯುವಕನ ಕೊಲೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ: ಎರಡು FIR ದಾಖಲು

by Mallika
0 comments

Mangalore: ಸಾಮಾಜಿಕ ಜಾಲತಾಣಗಳಲ್ಲಿ ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿಗಳನ್ನು ಹಂಚಿಕೊಂಡ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ʼವಾಮಂಜೂರು ಫ್ರೆಂಡ್ಸ್‌ʼ ಎಂಬ ವಾಟ್ಸಪ್‌ ಗ್ರೂಪಿನಲ್ಲಿ ʼಅನೈತಿಕ ಸಂಬಂಧʼ ಕುರಿತು ಸುಳ್ಳು ಸುದ್ದಿ ಆರೋಪದಡಿಯಲ್ಲಿ ರಿತೇಶ್‌ ಅಲಿಯಾಸ್‌ ರಿತು ಎಂಬಾತನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೀಮ್‌ ಜೋಕರ್ಸ್‌ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ʼ ನಮ್ಮ ಸಹೋದರನನ್ನು ಕೊಂದ ಚಕ್ಕ ಶಿಖಂಡಿಗಳ ರಕ್ತ ಈ ಭೂಮಿಗೆ ಹರಿಸದೆ ನಾವು ಸುಮ್ಮನೆ ಕೂರುವುದಿಲ್ಲ. ಇದಕ್ಕೆ ಉತ್ತರಕೊಟ್ಟೆ ಕೊಡುವೆವು. ನಿಮ್ಮಂತಹ ಶಿಖಂಡಿಗಳು ನಾವು ಅಲ್ಲ. ನಮ್ಮ ಸಹೋದರನ ಕೊಂದ ನಾಮರ್ದ ಚಕ್ಕ ಶಿಖಂಡಿಗಳ ರಕ್ತ ಭೂಮಿಗೆ ಹರಿಸುವುದು ಶತಸಿದ್ಧ ಎಂಬ ಸಂದೇಶ ಹಾಕಿಕೊಂಡ ಕುರಿತು ಎಫ್‌ಐಆರ್‌ ದಾಖಲು ಮಾಡಲಾಗಿದೆ.

You may also like