Home » ಬಂಟ್ವಾಳ: ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧದ ಶಂಕೆ |ಒಡಹುಟ್ಟಿದ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಅಣ್ಣ

ಬಂಟ್ವಾಳ: ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧದ ಶಂಕೆ |ಒಡಹುಟ್ಟಿದ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಅಣ್ಣ

0 comments

ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಶಂಕಿಸಿದ ಅಣ್ಣನೇ ತಮ್ಮನ ತಲೆಗೆ ಸಲಾಕೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಗೈದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿಯ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ನಡೆದಿದೆ.

ಅಣ್ಣನ ಸಲಾಕೆಯ ಹೊಡೆತಕ್ಕೆ ಸಿಕ್ಕಿ ಮೃತಪಟ್ಟ ವ್ಯಕ್ತಿಯನ್ನು ಸುಂದರ ಎಂದು ಗುರುತಿಸಲಾಗಿದ್ದು, ಕೊಲೆ ನಡೆಸಿದ ಆರೋಪಿ ಸ್ವಂತ ಅಣ್ಣ ರವಿ ಎಂದು ತಿಳಿದು ಬಂದಿದೆ.

ತನ್ನ ಮೂಲ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅವಿವಾಹಿತ ತಮ್ಮ ಸುಂದರನಿಗೆ ಅಣ್ಣ ರವಿಯ ಪತ್ನಿ ಊಟ ನೀಡುತ್ತಿದ್ದರು.ಇದೆಲ್ಲವನ್ನು ಅನುಮಾನದಿಂದ ಕಂಡ ರವಿ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಇದೆ ಎಂಬ ಶಂಕಿಸಿ,ಶುಕ್ರವಾರ ರಾತ್ರಿ ಜಗಳಕಾಯ್ದಿದ್ದಾನೆ,ಜಗಳ ತಾರಕಕ್ಕೇರಿದಾಗ ಅಡಕೆ ಸಲಾಕೆಯಿಂದ ಹೊಡೆದು ತಮ್ಮನನ್ನು ಕೊಲೆ ಮಾಡಿದ್ದಾನೆ.

ಘಟನೆ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಒಟ್ಟಿನಲ್ಲಿ ಅನೈತಿಕ ಸಂಬಂಧದ ಶಂಕೆ, ಅನುಮಾನದ ದೃಷ್ಟಿಗೆ ಅಮಾಯಕ ಜೀವವೊಂದು ಬಲಿಯಾಗಿದೆ.

You may also like

Leave a Comment