Home » ಬಂಟ್ವಾಳ:ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ ಐವರು ಆರೋಪಿಗಳಿಂದ ಬಯಲಾಯಿತು ಘಟನೆಯ ಸತ್ಯ!!ಆರೋಪಿಗಳಲ್ಲಿ ಓರ್ವ ಬಾಲಕಿಯ ಫೇಸ್ಬುಕ್ ಗೆಳೆಯ

ಬಂಟ್ವಾಳ:ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ ಐವರು ಆರೋಪಿಗಳಿಂದ ಬಯಲಾಯಿತು ಘಟನೆಯ ಸತ್ಯ!!ಆರೋಪಿಗಳಲ್ಲಿ ಓರ್ವ ಬಾಲಕಿಯ ಫೇಸ್ಬುಕ್ ಗೆಳೆಯ

0 comments

ಬಂಟ್ವಾಳದಲ್ಲಿ ನಿನ್ನೆ ನಡೆದ ಬಾಲಕಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ತನಿಖೆಯ ಬಳಿಕ ತಿರುವನ್ನು ಪಡೆದುಕೊಂಡಿದ್ದು,ಪ್ರಕರಣದ ಐವರು ಆರೋಪಿಗಳಾದ ಕಾಪು ನಿವಾಸಿ ಕೆ.ಎಸ್. ಶರತ್ ಶೆಟ್ಟಿ, ಮಾರುತಿ, ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಇದಾಯತುಲ್ಲ ಎಂಬವರನ್ನು ಬಂಟ್ವಾಳ ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ವಿಚಾರಣೆ ನಡೆಸಿದಾಗ ಆರೋಪಿಯಾದ ಶರತ್ ಶೆಟ್ಟಿ ಈ ಮೊದಲೇ ಯುವತಿಯೊಂದಿಗೆ ಫೇಸ್ಬುಕ್ ಮೂಲಕ ಪರಿಚಯಗೊಂಡು, ತನ್ನ ಸ್ನೇಹಿತ ಮಂಜುನಾಥ್ ಗೂ ಆಕೆಯನ್ನು ಪರಿಚಯಿಸಿದ್ದ.

ಬಾಲಕಿಯ ನಂಬರ್ ಸಿಕ್ಕಿದ ಕೂಡಲೇ ಮಂಜುನಾಥ ಬಾಲಕಿಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದು, ವಾಟ್ಸಪ್ ಮೂಲಕ ಕೆಲ ಅಶ್ಲೀಲ ವೀಡಿಯೋ ಕೂಡಾ ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದೆರಡು ದಿನಗಳ ಹಿಂದೆ ಆರೋಪಿ ಶರತ್ ಶೆಟ್ಟಿ ಬಾಲಕಿಯನ್ನು ಮಂಗಳೂರಿಗೆ ಬರುವಂತೆ ತಿಳಿಸಿದ್ದು, ಅದರಂತೆ ಬಾಲಕಿ ಈತನ ಮಾತನ್ನು ನಂಬಿ, ಮಂಗಳೂರಿಗೆ ತೆರಳಿದ್ದು ಸಿಟಿ ಮಹಲ್ ಬಳಿ ಇಬ್ಬರೂ ಜೊತೆಯಾಗಿ,ಆ ಬಳಿಕ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಲ್ಲದೇ, ತನ್ನ ಸ್ನೇಹಿತ ಇದಾಯತುಲ್ಲ ನಿಗೂ ಬರಹೇಳಿ ಅತ್ಯಾಚಾರ ನಡೆಸಲೂ ಹೇಳಿದ್ದಾನೆ.

ಆ ಬಳಿಕ ಲಾಡ್ಜ್ ನಲ್ಲಿ ಅವಕಾಶ ಕೊಟ್ಟ ಆರೋಪಿ ಸತೀಶ್ ಕೂಡಾ ಬಾಲಕಿಗೆ ಖಾಸಗಿ ಅಂಗಗಳನ್ನು ಸ್ಪರ್ಶಸಿ ಕಿರುಕುಳ ನೀಡಿದ್ದು ಬಳಿಕ ಬಂಟ್ವಾಳಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ಹೊರಬರಬೇಕಾಗಿದೆ.

You may also like

Leave a Comment