Home » ಬಂಟ್ವಾಳ : ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

ಬಂಟ್ವಾಳ : ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

0 comments

ಬಂಟ್ವಾಳ: ಬಾಲಕಿಯೋರ್ವಳು ತೀವ್ರವಾದ ಜ್ವರಕ್ಕೆ ಬಲಿಯಾಗಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.

ಮೃತ ಬಾಲಕಿ ಕಲ್ಲಡ್ಕದ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ(6).

ಈಕೆ ಮಾಣಿಯ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಜ್ವರ ಏಕಾಏಕಿ ಹೆಚ್ಚಳವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

You may also like

Leave a Comment