Dasara: ನಿನ್ನೆ ತಾನೆ ನಾಡಹಬ್ಬ ದಸರಾ ಉದ್ಘಾಟನೆಗೊಂಡಿದೆ. ಭೂಕರ್ ಪ್ರಶಸ್ತಿ ವಿಜೇತ ಭಾನು ಮುಷ್ತಾಕ್ ಹಲವು ವಿರೋಧಗಳ ನಡುವೆ ದರವನ್ನು ಯಶಸ್ವಿಯಾಗಿ ಉದ್ಘಾಟನೆಗೊಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ಭಾನು ಅವರನ್ನು ವಿರೋಧಿಸುತ್ತಿದ್ದ ಬಿಜೆಪಿ ಮೃದು ಧೋರಣೆ ತಾಳಿದ್ದು, ಬಾನು ಮುಷ್ತಾಕ್ ಅವರು ಹಿಂದು ಸಂಪ್ರದಾಯದಂತೆ ನಡೆದುಕೊಂಡಿದ್ದಾರೆ. ಅವರನ್ನು ವಿರೋಧಿಸುವ ಪ್ರಶ್ನೆ ಇಲ್ಲ ಎಂದು ಹೇಳಿದೆ.
ಹೌದು, ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧವಿತ್ತು. ಆದರೇ ಅವರು ಹಿಂದೂ ಸಂಸ್ಕೃತಿಗೆ ಗೌರವ ಬರುವಂತೆ ನಡೆದುಕೊಂಡಿದ್ದಾರೆ. ಅವರನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ ಇತ್ತು. ಆದರೇ ಇಂದು ಖುಷಿಯಾಗಿದೆ. ಹಿಂದೂ ಹೆಣ್ಣುಮಗಳ ರೀತಿ ದೇವಸ್ಥಾನಕ್ಕೆ ಬಂದು ಕೈಮುಗಿದಿದ್ದಾರೆ. ಆರತಿ ಬೆಳಗಿ ದೇವರ ಮುಂದೆ ನಿಂತು ಕೈಮುಗಿದಿದ್ದಾರೆ. ಚಾಮುಂಡಿ ಆಶೀರ್ವಾದದಿಂದ ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ದೇನೆ ಎಂದಿದ್ದಾರೆ. ಅವತ್ತೇ ಬಾನು ಮುಷ್ತಾಕ್ ಈ ಮಾತು ಹೇಳಿದ್ದರೇ ವಿರೋಧವೇ ಇರುತ್ತಿರಲಿಲ್ಲ. ಹಿಂದೂ ಸಂಸ್ಕೃತಿಗೆ ಗೌರವ ಬರುವ ರೀತಿ ನಡೆದುಕೊಂಡಿದ್ದಾರೆ. ಇನ್ನೂ ಬಾನು ಮುಷ್ತಾಕ್ ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ತಿಳಿಸಿದರು.
