Home » Tamilunadu: ‘ಚಿಕನ್ ಚಿಲ್ಲಿ’ ಎಂದು ಬಾವಲಿ ಮಾಂಸದ ಖಾದ್ಯ ಮಾರಾಟ !! ಇಬ್ಬರು ಅರೆಸ್ಟ್

Tamilunadu: ‘ಚಿಕನ್ ಚಿಲ್ಲಿ’ ಎಂದು ಬಾವಲಿ ಮಾಂಸದ ಖಾದ್ಯ ಮಾರಾಟ !! ಇಬ್ಬರು ಅರೆಸ್ಟ್

0 comments

Tamilunadu : ಬಾವಲಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ಕೋಳಿ ಮಾಂಸದ ಜೊತೆ ಮಿಶ್ರಣ ಮಾಡಿ ಚಿಕನ್ ಚಿಲ್ಲಿ ಎಂದು ಹೇಳಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಹಾಗೂ ಆಹಾರ ಸುರಕ್ಷತ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸೇಲಂನ ತೋಪ್ಪುರ್ ರಾಮಸಾಮಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಡೆಸಿದ ದಾಳಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಿದರು. ಈ ವೇಳೆ ಮಾರಾಟಕ್ಕಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಬಾವಲಿ ಮಾಂಸವನ್ನು ಬೇಯಿಸುತ್ತಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ 36 ವರ್ಷದ ಕಮಲ್ ಮತ್ತು 35 ವರ್ಷದ ಸೆಲ್ವಂ ಎಂಬುವರನ್ನು ಬಂಧಿಸಲಾಗಿದೆ. ಇವರು ಬಾವಲಿ ಮಾಂಸವನ್ನು ಚಿಲ್ಲಿ ಚಿಕನ್ ಮತ್ತು ಇತರ ಜನಪ್ರಿಯ ಭಕ್ಷ್ಯಗಳೆಂದು ಹೇಳಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನರು ಇಲ್ಲಿ ಕೋಳಿ ಮಾಂಸ ಎಂದು ನಂಬಿ ಬಾವಲಿ ಮಾಂಸವನ್ನು ಸೇವಿಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: Santosh Lad: ಇನ್ಮುಂದೆ ಕಾರ್ಮಿಕರಿಗೆ ಒತ್ತಡ ಹೇರಿ 10 ಗಂಟೆ ಕೆಲಸ ಮಾಡಿಸುವಂತಿಲ್ಲ – ಕಂಪನಿಗಳಿಗೆ ಸರ್ಕಾರ ಖಡಕ್ ವಾರ್ನಿಂಗ್

You may also like