Home » Hit and Run: ಹಿಟ್‌ ಆಂಡ್‌ ರನ್‌ಗೆ ಬಿಕಾಂ ಪದವೀಧರೆ ಸಾವು

Hit and Run: ಹಿಟ್‌ ಆಂಡ್‌ ರನ್‌ಗೆ ಬಿಕಾಂ ಪದವೀಧರೆ ಸಾವು

0 comments
Tragic Story

Hit and Run: ನಗರದಲ್ಲಿ ಹಿಟ್‌ ಆಂಡ್‌ ರನ್‌ಗೆ ಪದವೀಧರೆಯೊಬ್ಬಳು ಸಾವಿಗೀಡಾಗಿರುವ ಘಟನೆ ಬೂದಿಗೆರೆ ವೃತ್ತದ ಬಳಿ ನಡೆದಿದೆ. ಇಂದು ಬೆಳಗ್ಗೆ 8.50 ರ ಸುಮಾರಿಗೆ ಈ ಘಟನೆ ನಡೆದಿದ್ದು, ದ್ವಿತೀಯ ವರ್ಷದ ಬಿ.ಕಾಂ ಪದವೀಧರೆ ಸಾವಿಗೀಡಾಗಿದ್ದಾಳೆ.

ಘಟನೆ ನಡೆದ ಸ್ಥಳದ ರಸ್ತೆಯು ಸಂಪೂರ್ಣ ಹಾಳಾಗಿರುವುದಾಗಿ ಹೇಳಲಾಗಿದೆ. ಹೀಗಾಗಿ ಸ್ಕಿಡ್‌ ಆಗಿ ಬಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್‌ ಲಾರಿ ಹರಿದಿದ್ದು, ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಟಿಪ್ಪರ್‌ಗೆ ಡಿಕ್ಕಿಯಾಗಿ ಆಕೆ ಸಾವಿಗೀಡಾಗಿದ್ದಾಳೆ ಎಂದು ಪರಿಶೀಲನೆ ಮಾಡಲಾಗುತ್ತಿದೆ.

ಸ್ಥಳಕ್ಕೆ ಕೆ.ಆರ್‌.ಪುರಂ ಟ್ರಾಫಿಕ್‌ ಮತ್ತು ಅವಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಕುರಿತು ಅವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಮೃತದೇಹ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

You may also like