4
Half Helmet: ಯಾರೂ ಕೂಡ ಆಫ್ ಹೆಲ್ಮೆಟ್ ಧರಿಸದಂತೆ ಪೊಲೀಸ್ ಎಷ್ಟೇ ವಾರ್ನ್ ಮಾಡಿದ್ರು ನೋ ಯೂಸ್. ಮತ್ತದೇ ತಪ್ಪನ್ನು ಸಾರ್ವಜನಿಕರು ಮಾಡುತ್ತಿದ್ದಾರೆ. ಅಲ್ಲದೆ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಕೂಡ ಧರಿಸುವಂತಿಲ್ಲ ಅಂದ್ರೂ ನೋ ಕ್ಯಾರ್. ಆದ್ರೀಗ ಆಫ್ ಹೆಲ್ಮೆಟ್ ಧರಿಸಿದ್ರೆ ಇನ್ಮುಂದೆ ದಂಡ ಬಿಳೋದು ಗ್ಯಾರಂಟಿ.
ವಾಹನ ಸವಾರರಿಗೆ ಆಫ್ ಹೆಲ್ಮೆಟ್ ಧರಿಸದಂತೆ ಬೆಂಗಳೂರು ನಗರ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಿಂದ ಸೂಚನೆ ಹೊರಡಿಸಲಾಗಿದೆ.
ಹಲವೆಡೆ ಕಾರ್ಯಾಚರಣೆ ಮಾಡಿರುವ ಟ್ರಾಫಿಕ್ ಸಿಬ್ಬಂದಿ, ಆಫ್ ಹೆಲ್ಮೆಟ್ ಧರಿಸಿದ್ದ ವಾಹನ ಸವಾರರನ್ನ ತಡೆದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ನಗರದ ಕಬ್ಬನ್ ಪಾರ್ಕ್, ಅಶೋಕ ನಗರ ,ಹೈಗ್ರೌಂಡ್ ಸೇರಿ ಹಲವು ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
