Belgavi Schoolbus Driver: ಬೆಳಗಾವಿ (Belagavi news) ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ (Viral News)ತುಂಬಿ ಹರಿವ ಹಳ್ಳದಲ್ಲಿ ಶಾಲಾ ಬಸ್ (School bus) ಚಲಾಯಿಸಿ ಮಕ್ಕಳ ಜೀವದ ಜೊತೆಗೆ ಚೆಲ್ಲಾಟ ನಡೆಸಿದ ಘಟನೆ ವರದಿಯಾಗಿದೆ.
ಬೆಳಗಾವಿ ಎಲಿಮುನ್ನೋಳಿ ಗ್ರಾಮದ ಬೀರೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ವಾಹನ 20ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯಲಾಗಿದೆ. ಹುಕ್ಕೇರಿ ತಾಲೂಕಿನ ವಿವಿಧೆಡೆ ಭಾರಿ ಮಳೆ ಸುರಿದಿದ್ದು, ಹಳ್ಳಗಳು ತುಂಬಿಕೊಂಡಿದ್ದು,ವರುಣನ ಅಬ್ಬರಕ್ಕೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯ ಪರಿಣಾಮ ಹಳ್ಳದಿಂದ ರಸ್ತೆಗೆ ನೀರು ನುಗ್ಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಸಂದರ್ಭ ನೀರಿನಲ್ಲಿ ಚಾಲಕ(Belgavi Schoolbus Driver) ಅತಿಯಾದ ಆತ್ಮವಿಶ್ವಾಸದಿಂದ ಬಸ್ ಚಲಾಯಿಸಲು ಮುಂದಾಗಿದ್ದಾನೆ. ಬಸ್ ಅರ್ಧ ಮಗುಚಿಕೊಂಡಿದ್ದು, ಅರ್ಧ ದಾರಿಯಲ್ಲಿ ಗುಂಡಿಯಲ್ಲಿ ಮಕ್ಕಳನ್ನು ಪಾರು ಮಾಡಿದ್ದಾರೆ. ಚಾಲಕನ ಉಡಾಫೆ ಚಾಲನೆಯಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದು, ಸದ್ಯ, ಚಾಲಕನ ನಿರ್ಲಕ್ಷ್ಯ ಧೋರಣೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Dharwad Shocking News:ದಹನಕ್ಕಾಗಿ ಶವ ಹೊತ್ತೊಯ್ಯುತ್ತಿದ್ದ ಜನ- ಮಾರ್ಗ ಮಧ್ಯೆಯೇ ಧಿಗಿಲ್ಲನೆ ಎದ್ದು ಕುಳಿತಿತು ಹೆಣ !!
