Home » Belagavi : ರಾಜ್ಯದ ಕರಾವಳಿ ತೀರದಲ್ಲಿ ಮದ್ಯ ಮಾರಾಟಕ್ಕೆ ಅಧಿಕೃತ ಒಪ್ಪಿಗೆ – DCM ಡಿಕೆ ಶಿವಕುಮಾರ್ ಹೇಳಿಕೆ

Belagavi : ರಾಜ್ಯದ ಕರಾವಳಿ ತೀರದಲ್ಲಿ ಮದ್ಯ ಮಾರಾಟಕ್ಕೆ ಅಧಿಕೃತ ಒಪ್ಪಿಗೆ – DCM ಡಿಕೆ ಶಿವಕುಮಾರ್ ಹೇಳಿಕೆ

0 comments
Property Tax

Belagavi : ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ರಾಜ್ಯದ ಕರಾವಳಿ ತೀರದುದ್ದಕ್ಕೂ ಮದ್ಯ ಮಾರಾಟಕ್ಕೆ ಅಧಿಕೃತವಾದ ಒಪ್ಪಿಗೆಯನ್ನು ನೀಡಬೇಕೆಂಬುದಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಚರ್ಚೆಯ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಕರಾವಳಿ ತೀರದ ಪ್ರದೇಶಗಳಲ್ಲಿ ಕದ್ದು ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದು ಇಲ್ ಲೀಗಲ್ ಆಗಿದೆ. ಆದರೆ ಸರ್ಕಾರ ಇದಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡುವುದು ಉತ್ತಮ. ಕಳ್ಳತನದಲ್ಲಿ ತಂದು ಮಾರುವುದಕ್ಕಿಂತಲೂ ಲೈಸೆನ್ಸ್ ಪಡೆದು ಮಾರಿದರೆ ಉತ್ತಮವಾದ ನಡತೆಯಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ ಮನೆಗಳಲ್ಲಿ ಏಳು ಬಾಟಲ್ ಮದ್ಯವನ್ನು ಮಾತ್ರ ಇಟ್ಟುಕೊಳ್ಳಬೇಕು ಹೆಚ್ಚಿನದನ್ನು ಇಟ್ಟುಕೊಳ್ಳುವಂತಿಲ್ಲ ಎಂಬ ರೂಲ್ಸ್ ಇದೆ. ಆದರೆ ನಮಗೆ ಬಂದವರೆಲ್ಲರೂ ಒಂದೆಂದು ಬಾಟಲಿ ತಂದು ಕೊಡುತ್ತಾರೆ. ಇದನ್ನು ಕಂಟ್ರೋಲ್ ಮಾಡಲು ಆಗುವುದಿಲ್ಲ. ಈ ವೇಳೆ ಇನ್ಕಮ್ ಟ್ಯಾಕ್ಸ್ ಏನಾದರೂ ರೈಡ್ ಮಾಡಿದರೆ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ಇದಕ್ಕೂ ಹೊಸ ನಿಯಮವನ್ನು ಜಾರಿಗೊಳಿಸಬೇಕು ಎಂಬುದಾಗಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

You may also like