4
ಬೆಳಾಲು: ಕಲಾವೈಭವ ಶ್ರೀ ವಿಶ್ವಕರ್ಮ ಸಮಿತಿಯಿಂದ ಜ.15ರಂದು ಬೆಳಾಲು ಮೈತ್ರಿ ಯುವಕ ಮಂಡಲದಲ್ಲಿ 2ನೇ ವರ್ಷದ ಭಗವಾನ್ ಶ್ರೀ ವಿಶ್ವಕರ್ಮ ಪೂಜೆ ಗಣೇಶ್ ಪುರೋಹಿತರು ಮತ್ತು ಬಳಗದ ಆಚಾರ್ಯತ್ವದಲ್ಲಿ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ಬಾಲಚಂದ್ರ ಆಚಾರ್ಯ ಶಿವಾಶ್ರಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ಬೆಳಾಲು ಹಾಲು ಉತ್ಪಾದಕರ ಸಂಘದ ನಿರ್ದೇಶಕ ರೋಹಿತಾಕ್ಷ ಆಚಾರ್ಯ, ಪ್ರಮುಖರಾದ ಶ್ಯಾಮರಾಯ ಆಚಾರ್ಯ, ವಾಸುದೇವ ಆಚಾರ್ಯ, ವಸಂತ ಆಚಾರ್ಯ, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಮಾಜ ಭಾಂದವರು ಉಪಸ್ಥಿತರಿದ್ದರು. ಸೋಮನಾಥ ಆಚಾರ್ಯ ಮತ್ತು ಬಳಗ ಗೇರುಕಟ್ಟೆ ಇವರು ಸಹಕರಿಸಿದರು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದ ನಂತರ ವೈವಿದ್ಯ ಕಾರ್ಯಕ್ರಮ ಜರಗಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಸಂತ ಆಚಾರ್ಯ ಆಲಡ್ಕ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು. ರತ್ನಾಕರ ಆಚಾರ್ಯ ಸ್ವಾಗತಿಸಿದರು. ಶಿಲ್ಪಿ ಶಶಿಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
