Home » ಬೆಳಂದೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಸಂಬಂಧಿಕರ ಕಾರು ಅಪಘಾತ ನಾಲ್ವರಿಗೆ ಗಾಯ

ಬೆಳಂದೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಸಂಬಂಧಿಕರ ಕಾರು ಅಪಘಾತ ನಾಲ್ವರಿಗೆ ಗಾಯ

by Praveen Chennavara
0 comments

ಕಡಬ : ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ತಮ್ಮ ಸಂಭಂಧಿಕರ ಮನೆ ಪುತ್ತೂರಿಗೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸಂಬಂಧಿಕರ ಕಾರು ಬೆಳ್ಳಾರೆ ಠಾಣಾ ವ್ಯಾಪ್ತಿಯ ಬೆಳಂದೂರಿನಲ್ಲಿ ಅಪಘಾತ ಸಂಭವಿಸಿ ಮಗು ಸಹಿತ ನಾಲ್ವರಿಗೆ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡವರನ್ನು ಬೆಂಗಳೂರಿನ ಜೆಪಿ ನಗರದ 9 ನೇ ಬ್ಲಾಕ್‌ನ ಒಂದೇ ಮನೆಯ ನಿವಾಸಿಗಳಾದ ರಮ್ಯಾ(33) ಇವರ ಮಗು ಮೂರು ವರ್ಷದ ಆರ್ಮ, ಮಾವ ರಾಮಚಂದ್ರ(63) ಹಾಗೂ ಅತ್ತೆ ವಾಣಿ(60) ಎಂದು ಗರುತಿಸಲಾಗಿದೆ, ಕಾರು ಚಲಾಯಿಸುತ್ತಿದ್ದ ರಮ್ಯಾ ಅವರ ಪತಿ ನಿರಂಜನ್ ಅವರಿಗೆ ಯಾವುದೇ ಗಾಯಾಗಳಾಗಿಲ್ಲ.
ಯಾತ್ರೆ ಮುಗಿಸಿ ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಕಾಣಿಯೂರು ಸಮೀಪದ ಬೆಳಂದೂರಿನಲ್ಲಿ ದನವೊಂದು ಅಡ್ಡ ಬಂದು ಅದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಬಿದ್ದಿದೆ. ಗಾಯಾಳುಗಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

You may also like

Leave a Comment