Belagavi: ಡಿಸಿಸಿ ಬ್ಯಾಂಕ್ (DCC Bank) ಚುನಾವಣೆ (Election) ಕಾವೇರಿದ್ದು, ಸಚಿವ ಸತೀಶ್ ಜಾರಕಿ ಹೋಳಿ ಹಾಗೂ ರಮೇಶ್ ಕತ್ತಿಯವರ ವಿರುದ್ಧ ಜಿದ್ದಾಜಿದ್ದಿ ನಡೆದಿದೆ. ಈ ವೇಳೆ ಚುನಾವಣೆಯಲ್ಲಿ ತನ್ನ ಗಂಡ ರಮೇಶ್ ಕತ್ತಿಯನ್ನು ಬೆಂಬಲಿಸದೆ ಸಚಿವ ರಮೇಶ್ ಜಾರಕಿಹೊಳಿ ಪರ ನಿಂತಿದ್ದಕ್ಕೆ ಪತ್ನಿಯು ಸಚಿವರ ದೊರೆ ಗಂಡನ ಕಾಲರ ಹಿಡಿದು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹ ಳ್ಳಿ ಗ್ರಾಮದಲ್ಲಿ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಎಂಬಾತ ಸಚಿವ ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡಿದ್ದ. ಇದರಿಂದ ಆಕ್ರೋಶಗೊಂಡ ಆತನ ಪತ್ನಿ ಸಚಿವರ ಎದುರಲ್ಲೇ ಪತಿಯ ಕೊರಳ ಪಟ್ಟಿ ಹಿಡಿದು ಹೊಡೆದಿದ್ದಾಳೆ. ಅಷ್ಟೇ ಅಲ್ಲದೇ ರಮೇಶ್ ಕತ್ತಿ ಬೆಂಬಲಿಸಬೇಕೆಂದು ಜಗಳ ಮಾಡಿದ್ದಾಳೆ. ಸಚಿವ ಸತೀಶ್ ಜಾರಕಿಹೊಳಿ ಎದುರೇ ಪತಿ- ಪತ್ನಿ ನಡುವೆ ಗಲಾಟೆ ನಡೆದಿದ್ದು, ಇದರಿಂದ ಕೊಂಚ ವಿಚಲಿತರಾದ ಸತೀಶ್ ಜಾರಕಿಹೊಳಿ ಅವರು ಪತಿ- ಪತ್ನಿ ನಡುವಿನ ಗಲಾಟೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕೋರಂ ಸಲುವಾಗಿ ಸೋಮವಾರ ನಿಗದಿಗೊಂಡಿದ್ದ ಚುನಾವಣೆ ಕಾಲಕ್ಕೆ ತ್ವೇಷಮಯ ವಾತಾವರಣ ನಿರ್ಮಾಣವಾಯಿತು. ಗ್ರಾಮದ ಕೆಲವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ ಮೊಳಗಿಸಿದರು. #belagavi pic.twitter.com/j20Wfa7dKL
— Prajavani (@prajavani) September 8, 2025
ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದರೂ ಚುನಾವಣೆವಿಷಯದಲ್ಲಿ ಹುಕ್ಕೇರಿತಾಲೂಕಿನಲ್ಲಿ ಸಚಿವಸತೀಶ್ ಜಾರಕಿಹೊಳಿ ಹಾಗೂ ಮಾಜಿಸಂಸದ ರಮೇಶ್ಕತ್ತಿ ನಡುವಿನ ಕಾಳಗಜೋರಾಗಿದೆ. ದಿನದಿಂದದಿನಕ್ಕೆ ನಡೆಯುತ್ತಿರುವ ರಾಜಕೀಯಬೆಳವಣಿಗೆ ಸಾಕಷ್ಟು ಕುತೂಹಲಹುಟ್ಟಿಸಿದೆ.
