Home » ನಾಪತ್ತೆಯಾಗಿದ್ದ ಬೆಳ್ಳಾರೆ ರಬ್ಬರ್ ಸೊಸೈಟಿ ಅಧ್ಯಕ್ಷ ರಾಜೇಶ್ ಗುಂಡಿಗದ್ದೆ ಗೋವಾದಲ್ಲಿ ಪತ್ತೆ

ನಾಪತ್ತೆಯಾಗಿದ್ದ ಬೆಳ್ಳಾರೆ ರಬ್ಬರ್ ಸೊಸೈಟಿ ಅಧ್ಯಕ್ಷ ರಾಜೇಶ್ ಗುಂಡಿಗದ್ದೆ ಗೋವಾದಲ್ಲಿ ಪತ್ತೆ

by Praveen Chennavara
0 comments

ಮನೆಯಿಂದ ಸುಳ್ಯ ಪೇಟೆಗೆ ಹೋಗಿಬರುವುದಾಗಿ ಹೇಳಿ ಹೋದ ರಾಜೇಶರು ವಾಪಾಸು ಬಾರದೆ ಕಾಣೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ಬೆಳ್ಳಾರೆ ಠಾಣೆಯಲ್ಲಿ ಪೊಲೀಸು ದೂರು ನೀಡಿದ್ದರು.ಇದೀಗ ಬೆಳ್ಳಾರೆ ಪೊಲೀಸರು ರಾಜೇಶ್ ಗುಂಡಗದ್ದೆ ಅವರನ್ನು ಗೋವಾದಲ್ಲಿ ಪತ್ತೆಹಚ್ಚಿ ಊರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿ ರಾಜೇಶ್ ಅವರ ಸಂಬಂಧಿಕರಲ್ಲಿಯೂ ಹುಡುಕಾಟ ನಡೆಸಿದ್ದರು. ಸೆ.12 ರಂದು ರಾಜೇಶ ಗುಂಡಿಗದ್ದೆ ಅವರು ಗೋವಾದಲ್ಲಿರುವುದು ಪೊಲೀಸರಿಗೆ ಗೊತ್ತಾಗಿ ಅವರನ್ನು ಪೊಲೀಸರು ಸೆ.13 ರಂದು ಠಾಣೆಗೆ ಕರೆತಂದಿರುವುದಾಗಿ ತಿಳಿದು ಬಂದಿದೆ.

ರಾಜೇಶರು ಸಂಪಾಜೆಯಿಂದ ಮಡಿಕೇರಿ ಮೂಲಕ ಕುಶಾಲನಗರದಿಂದ ಮೈಸೂರಿಗೆ ಹೋಗಿ ಮೈಸೂರಿನಲ್ಲಿ ತನ್ನ ಕಾರನ್ನು ನಿಲ್ಲಿಸಿ ನಂತರ ಅಲ್ಲಿಂದ ಬಸ್ಸಲ್ಲಿ ತಿರುಪತಿಗೆ ಹೋಗಿ ಗೋವಾದಲ್ಲಿದ್ದರೆಂದು ತಿಳಿದುಬಂದಿದೆ.

You may also like

Leave a Comment