Home » ಬೆಳ್ಳಾರೆ : ಉಸ್ಮಾನ್ ಹಾಜಿ ಮಂಡೇಪು ನಿಧನ

ಬೆಳ್ಳಾರೆ : ಉಸ್ಮಾನ್ ಹಾಜಿ ಮಂಡೇಪು ನಿಧನ

by Praveen Chennavara
0 comments

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮಾಜಿ ಸದಸ್ಯರೂ ,ಬೆಳ್ಳಾರೆಯ ಉದ್ಯಮಿ ಬಶೀರ್ ಬಿ ಎ ಇವರ ತಂದೆ ಉಸ್ಮಾನ್ ಹಾಜಿ ಮಂಡೇಪು (81) ಅಲ್ಪಕಾಲದ ಅಸೌಖ್ಯದಿಂದ ಅಕ್ಟೋಬರ್ 29 ರಂದು ನಿಧನರಾದರು.

ಮೃತರು ಪತ್ನಿ ,ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಎಸ್ ಡಿ ಪಿ ಐ ಬೆಳ್ಳಾರೆ ಗ್ರಾಮ ಸಮಿತಿ ಉಸ್ಮಾನ್ ಹಾಜಿ ಮಂಡೇಪು ನಿಧನಕ್ಕೆ ಸಂತಾಪ

ಎಸ್ ಡಿ ಪಿ ಐ ಬೆಳ್ಳಾರೆ ಗ್ರಾಮ ಸಮಿತಿ ಕೋಶಾಧಿಕಾರಿ ,ಖಿದ್ಮತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಬೆಳ್ಳಾರೆ ಅಧ್ಯಕ್ಷ ಹಾಗೂ ಝಕರಿಯಾ ಜುಮಾ ಮಸೀದಿಯ ಮಾಜಿ ಸದಸ್ಯರೂ ಆದ ಬಶೀರ್ ಬಿ ಎ ಇವರ ತಂದೆ ಉಸ್ಮಾನ್ ಹಾಜಿ ಮಂಡೇಪು ಇವರ ನಿಧನಕ್ಕೆ ಎಸ್ ಡಿ ಪಿ ಐ ಸುಳ್ಯ ವಿಧಾನ ಕ್ಷೇತ್ರ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ ಎಂದು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ. ಮೃತರ ಪಾರತ್ರಿಕ ಜೀವನವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ ,ಕುಟುಂಬಕ್ಕೆ ಮತ್ತು ಬಂಧುಬಳಗಕ್ಕೆ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಇಂದು ಪ್ರಾರ್ಥಿಸುತ್ತಿದ್ದೇವೆ.

You may also like

Leave a Comment