Home News ಬಳ್ಳಾರಿ ಮಾಡೆಲ್‌ ಹೌಸ್‌ ಬೆಂಕಿ ಪ್ರಕರಣ: ಎಂಟು ಮಂದಿ ವಶ, ರೀಲ್ಸ್ ಹುಚ್ಚಿನ ಹುಡುಗರಿಂದ ರೆಡ್ಡಿ...

ಬಳ್ಳಾರಿ ಮಾಡೆಲ್‌ ಹೌಸ್‌ ಬೆಂಕಿ ಪ್ರಕರಣ: ಎಂಟು ಮಂದಿ ವಶ, ರೀಲ್ಸ್ ಹುಚ್ಚಿನ ಹುಡುಗರಿಂದ ರೆಡ್ಡಿ ಡಮ್ಮಿ ಮನೆಗೆ ಬೆಂಕಿ

Hindu neighbor gifts plot of land

Hindu neighbour gifts land to Muslim journalist

ನಗರ ಹೊರವಲಯದಲ್ಲಿರುವ ಶಾಸಕ ಜಿ.ಜನಾರ್ದನ ರೆಡ್ಡಿ, ಅವರ ಪತ್ನಿ ಲಕ್ಷ್ಮಿ ಅರುಣಾ ಅವರ ಒಡೆತನದ ಜಿ ಸ್ನಾಯರ್ ಪಾಳುಬಿದ್ದ ಬಡಾವಣೆಯ ಪ್ರದರ್ಶನ (ಡಮ್ಮಿ) ಮನೆಗೆ ರೀಲ್ಸ್ ಹುಚ್ಚಿನ ಹುಡುಗರು ಬೆಂಕಿ ಹಚ್ಚಿರುವುದು ಪೊಲೀಸರ ಪ್ರಾಥಮಿಕ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,”ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂದು ದೂರು ದಾಖಲಾಗಿದೆ. 1.25 ಕೋಟಿ ರೂ. ನಷ್ಟವಾಗಿದೆ ಎಂದು ಜಿ ಸ್ಟ್ರಾಯರ್ ಬಡಾವಣೆಯ ಸೈಟ್ ಎಂಜಿನಿಯರ್ ಅವರು ಬಳ್ಳಾರಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಕೌಲ್ ಬಜಾರ್‌ನ ಲೇಡಿಸ್ ಟೈಲರಿಂಗ್ ಸೋಪೈಲ್ ಸಾಹಿಲ್, ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡುವ ಸುರೇಶ್ ಸೇರಿ 8 ಜನರನ್ನು ವಶಕ್ಕೆ ಪಡೆದಿದ್ದು, ಆರು ಮಂದಿ ಅಪ್ರಾಪ್ತರು,” ಎಂದರು.

ಡಾ.ಸುಮನ್ ಡಿ.ಪನ್ನೇಕರ್ ಶನಿವಾರ ಪರಿಶೀಲಿಸಿದರು. ಪ್ರದೇಶಕ್ಕೆ ಹೋಗಿದ್ದರು ಎಂಬ ಪ್ರಾಥಮಿಕ ಮಾಹಿತಿಯಿದೆ. ಸಿಗರೇಟ್ ಸೇದುವಾಗ ಬೆಂಕಿ ತಗುಲಿರುವ ಶಂಕೆಯಿದೆ. ಮುಂಬಯಿಯಿಂದ ಬಂದ ಇಬ್ಬರು ಇವರ ಜತೆ ಇದ್ದರು. ವಶಕ್ಕೆ ಪಡೆದ ವ್ಯಕ್ತಿಗಳಿಗೆ ರಾಜಕೀಯ ಹಿನ್ನೆಲೆ ಇಲ್ಲ, ದೂರಿನಲ್ಲಿ ದಾಖಲಿಸಿರುವಂತೆ ಯಾವುದೇ ವಸ್ತುಗಳು ಸುಟ್ಟಿಲ್ಲ. ಈ ಬಡಾವಣೆಯಲ್ಲಿ ಸಿಸಿಟಿವಿ, ಸೆಕ್ಯುರಿಟಿ ಇರಲಿಲ್ಲ” ಎಂದರು.

ಏನಿದು ಪ್ರದರ್ಶನದ ಮನೆ?
ಬಳ್ಳಾರಿ ಹೊರವಲಯದ 80 ಎಕರೆ ವ್ಯಾಪ್ತಿಯಲ್ಲಿ ಜಿ ಸ್ಕ್ಯಾಯರ್ ಬಡಾವಣೆಯಿದೆ. ನಿವೇಶನ ಕೊಳ್ಳಲು ಬಯಸುವವರಿಗೆ ತೋರಿಸಲು ಎಲ್ಲಾ ಮಾದರಿಯ ಒಂದು ಡಮ್ಮಿ ಮನೆಯನ್ನು ಜನಾರ್ದನ ರೆಡ್ಡಿ ಅವರು 2011ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದರು ಎಂದು ಮೂಲಗಳು ತಿಳಿಸಿವೆ.”