Home » Beltangadi: ಕೊರಗಜ್ಜನ ಕಟ್ಟೆಗೆ ಬೆಂಕಿ ಪ್ರಕರಣಕ್ಕೆ ಟ್ವಿಸ್ಟ್!! 13 ಮಂದಿಯ ವಿರುದ್ಧ ದಾಖಲಾಯ್ತು ಕೇಸ್ – ಏನಾಗಿತ್ತು ಅಲ್ಲಿ

Beltangadi: ಕೊರಗಜ್ಜನ ಕಟ್ಟೆಗೆ ಬೆಂಕಿ ಪ್ರಕರಣಕ್ಕೆ ಟ್ವಿಸ್ಟ್!! 13 ಮಂದಿಯ ವಿರುದ್ಧ ದಾಖಲಾಯ್ತು ಕೇಸ್ – ಏನಾಗಿತ್ತು ಅಲ್ಲಿ

0 comments
Beltangadi

 

ವೇಣೂರು: ಇಲ್ಲಿನ ಠಾಣಾ ವ್ಯಾಪ್ತಿಯ ಬಜಿರೆ ಎಂಬಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಇಡೀ ಪ್ರಕರಣ ತಿರುವು ಪಡೆದುಕೊಂಡ ಬೆನ್ನಲ್ಲೇ ಮತ್ತೆ 13 ಮಂದಿಯ ವಿರುದ್ಧ ದೈವ ನಿಂದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.

ಹರೀಶ್ ಪೂಜಾರಿ ಎಂಬಾತನಿಗೆ ಪ್ರದೀಪ್ ಹೆಗ್ಡೆ ಹಾಗೂ ಆತನ ತಂಡ ವಿಪರೀತ ಮದ್ಯ ಕುಡಿಸಿದ್ದು, ಬೆಂಕಿ ಹಚ್ಚುವಂತೆ ಕುಮ್ಮಕ್ಕು ನೀಡಿತ್ತು ಎನ್ನಲಾಗಿದೆ.ಇತರ ಹನ್ನೆರಡು ಮಂದಿ ಆರೋಪಿಗಳಾದ ಸಂದೀಪ್ ಹೆಗ್ಡೆ, ಹರಿಪ್ರಸಾದ್, ಮನುಗೌಡ,ದಿನೇಶ್ ಪೂಜಾರಿ,ವಿಜಯ ಶೇಖರ, ಮೋಹನಂದ ಪೂಜಾರಿ,ಶ್ರೀಧರ್ ಪೂಜಾರಿ, ವಸಂತಿ ಪೂಜಾರ್ತಿ ಎಂಬವರು ಪ್ರದೀಪ್ ಹೆಗ್ಡೆಗೆ ಸಹಕರಿಸಿದ್ದಲ್ಲದೇ ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು ಎನ್ನುವ ಆರೋಪ ವ್ಯಕ್ತವಾಗಿದೆ.

ಡಾ.ರಾಜೇಶ್ ಅವರು ನೀಡಿರುವ ದೂರನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು,ಕುಟುಂಬದ ಮೇಲಿನ ಹಗೆಯ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಅಲ್ಲದೇ ಈಗಾಗಲೇ ಪ್ರದೀಪ್ ಹೆಗ್ಡೆ ಮಾತನಾಡಿರುವ ಆಡಿಯೋ ಕ್ಲಿಪ್ ಒಂದು ಕೇಸಿಗೆ ಮತ್ತಷ್ಟು ಪುಷ್ಠಿ ನೀಡಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.

 

ಇದನ್ನು ಓದಿ: Viral Video: ಮಹಿಳೆಯರ ಕೊಬ್ಬಿದ ಸೊಂಟ ಟ್ರ್ಯಾಕ್ಟರ್ ಟೈರ್ ಜೈಸಾ ಅಂದ ಸನ್ಯಾಸಿ – ಸನ್ಯಾಸಿಗೆ ಯಾಕೆ ಸೊಂಟದ ವಿಷ್ಯ ? 

You may also like

Leave a Comment