Home » ಬೆಳ್ತಂಗಡಿ: ಎರಡು ಕಾರುಗಳ ಮಧ್ಯೆ ಅಪಘಾತ | ಗಾಯಾಳುಗಳು ಮಂಗಳೂರು ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಎರಡು ಕಾರುಗಳ ಮಧ್ಯೆ ಅಪಘಾತ | ಗಾಯಾಳುಗಳು ಮಂಗಳೂರು ಆಸ್ಪತ್ರೆಗೆ ದಾಖಲು

by Praveen Chennavara
0 comments

ಬೆಳ್ತಂಗಡಿ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಸ್ವಿಫ್ಟ್ ಮತ್ತು ವ್ಯಾಗನರ್ ವಾಹನಗಳು ಪರಸ್ಪರ ಡಿಕ್ಕಿಹೊಡೆದು ಅಪಘಾತ ಸಂಭವಿಸಿದ ಘಟನೆ ಆ.30ರಂದು ರಾತ್ರಿ ಸಂಭವಿಸಿದೆ.

ಶಿರ್ಲಾಲು ಗ್ರಾಮದ ಕೊಡಂಗೆ ನಿವಾಸಿ ಶಾಜಿ ಕುರಿಯನ್ ರವರು ತಮ್ಮ ವ್ಯಾಗನರ್ (KL 05 AS 6353) ವಾಹನದಲ್ಲಿ ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಉಜಿರೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಬೆಳಗಾವಿ ಜಿಲ್ಲೆಯ ಹನುಮಾಪುರ ನಿವಾಸಿಗಳಾದ ಗಂಗಪ್ಪ ರಾಮು ತಿಗಣಿ, ಪತ್ನಿ ಅನ್ನಪೂರ್ಣ ಹಾಗೂ ಪುತ್ರ ಸಂಜಯ್ ಎಂಬವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್ (ಕೆಎ 23M7662) ವಾಹನಕ್ಕೆ ಬೆಳ್ತಂಗಡಿ ಮೂರು ಮಾರ್ಗದ ಬಳಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳ ಮುಂಭಾಗ ಜಖಂಗೊಂಡಿದೆ ಹಾಗೂ ಶಾಜಿ ಕುರಿಯನ್ ರವರಿಗೆ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ವಾಹನದಲ್ಲಿರುವ ಸಹ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

You may also like

Leave a Comment