Home » ಬೆಳ್ತಂಗಡಿ | ಬೆಳಾಲು ಗ್ರಾಮದಲ್ಲಿ ತಲೆದೋರಿದ ನೆಟ್ವರ್ಕ್ ಸಮಸ್ಯೆ, ಪ್ರಧಾನಿ ಕಾರ್ಯಾಲಯದಿಂದ 24 ಗಂಟೆಗಳಲ್ಲಿ ಸ್ಪಂದನೆ

ಬೆಳ್ತಂಗಡಿ | ಬೆಳಾಲು ಗ್ರಾಮದಲ್ಲಿ ತಲೆದೋರಿದ ನೆಟ್ವರ್ಕ್ ಸಮಸ್ಯೆ, ಪ್ರಧಾನಿ ಕಾರ್ಯಾಲಯದಿಂದ 24 ಗಂಟೆಗಳಲ್ಲಿ ಸ್ಪಂದನೆ

0 comments

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ತಲೆದೋರಿದ್ದ ನೆಟ್‌ವರ್ಕ್ ಸಮಸ್ಯೆಗಳಿಂದ ಜನಸಾಮಾನ್ಯರು ರೋಸಿಹೋಗಿದ್ದು, ಅಧಿಕಾರಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯದ ಕಾರಣ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದು, ಇದಕ್ಕೆ ಕೇವಲ 24 ತಾಸುಗಳಲ್ಲಿ ಪ್ರತ್ಯುತ್ತರ ಲಭಿಸಿದೆ.

ಬೆಳಾಲು ಗ್ರಾಮದ ಗ್ರಾಮದ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸಾರ್ವಜನಿಕರ ಪರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ದೂರು ನೀಡಲಾಗಿತ್ತು. ಇದಕ್ಕೆ 24 ಗಂಟೆಗಳಲ್ಲಿ ದೂರವಾಣಿ ಮುಖಾಂತರ ಸಮಸ್ಯೆಗೆ ಸ್ಪಂದನೆ ಸಿಕ್ಕಿದ್ದು, ಆಪ್ ಮೂಲಕ ಅಧಿಕಾರಿಗಳು ಸ್ಥಳದ ಮಾಹಿತಿ ಪಡೆದುಕೊಂಡಿದ್ದಾರೆ.

ಹಾಗೆಯೇ ಕೆಲವೇ ದಿನಗಳಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಭರವಸೆ ನೀಡಿದ್ದಾರೆ. ಪ್ರಸ್ತುತ ಗ್ರಾಮದ ಸಮಸ್ಯೆಗೆ ಕಾರ್ಯಾಲಯ ವಿಷಾದ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

You may also like

Leave a Comment