Home » ಬೆಳ್ತಂಗಡಿ | ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಸಮಾಲೋಚನಾ ಸಭೆ

ಬೆಳ್ತಂಗಡಿ | ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಸಮಾಲೋಚನಾ ಸಭೆ

by Praveen Chennavara
0 comments

ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ನಗರ ಇದರ ವತಿಯಿಂದ ಈ ದಿನ ಜಿಲ್ಲಾ ಕಾಂಗ್ರೆಸ್ ನ ತಾಲೂಕು ಉಸ್ತುವಾರಿ ಮೊಹಮ್ಮದ್ ಅಲಿರವರ ನೇತೃತ್ವದಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮ,ಕಾರ್ಯಯೋಜನೆಗಳ ರೂಪುರೇಷೆಯ ಕುರಿತು ಸಮಾಲೋಚನಾ ಸಭೆಯು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಸಮಾಲೋಚನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿ,ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು,ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ನಾಗರಾಜ್ ಲಾಯಿಲ,ಡಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಯೋಗಿಶ್ ಸುವರ್ಣ ಕೋಡ್ಲಕ್ಕೆ,ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಶೆಟ್ಟಿ,ಪಕ್ಷದ ವಕ್ತಾರರಾದ ಮನೋಹರ್ ಕುಮಾರ್ ಇಳಂತಿಲ,ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್,ಸಾಮಾಜಿಕ ಜಾಲತಾಣ ಅಧ್ಯಕ್ಷ ಸಂದೀಪ್ ಎಸ್ ನೀರಲ್ಕೆ ಅರ್ವ,ನಗರ ಪಂಚಾಯತ್ ಮಾಜಿ ಸದಸ್ಯ ಮೆಹಬೂಬ್,ಪ್ರಮುಖರಾದ ರಹಿಮಾನ್ ಲಾಯಿಲ,ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ಸತೀಶ್ ಶೆಟ್ಟಿ ಕುಕ್ಕಳ,ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಮಾವಿನಕಟ್ಟೆ,ಅವಿನಾಶ್ ಮೇಲಂತಬೆಟ್ಟು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

You may also like

Leave a Comment