Home » ಬೆಳ್ತಂಗಡಿ | ಮನೆಯಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ನಾಪತ್ತೆ, ಹತ್ತಿರದ ನದಿಗೆ ಮಗು ಇಳಿದ ಶಂಕೆ

ಬೆಳ್ತಂಗಡಿ | ಮನೆಯಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ನಾಪತ್ತೆ, ಹತ್ತಿರದ ನದಿಗೆ ಮಗು ಇಳಿದ ಶಂಕೆ

by ಹೊಸಕನ್ನಡ
0 comments

ಬೆಳ್ತಂಗಡಿ: ಸುಲ್ಕೇರಿ ಬಳಿಯ ಜಂತಿಗೋಳಿ ಬಳಿ ಮನೆಯಲ್ಲಿ ಆಟವಾಡುತ್ತಿದ್ದ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ನಾಪತ್ತೆಯಾದ ಘಟನೆ ನಡೆದಿದೆ.

ಜಂತಿಗೋಳಿ ಬಳಿಯ ಮನೆಯೊಂದರಲ್ಲಿ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗುವನ್ನು ಅಜ್ಜನ ಜೊತೆ ಬಿಟ್ಟು, ತಾಯಿ ಹಾಗೂ ಅಜ್ಜಿ ಹುಲ್ಲು ತರಲು ತೆರಳಿದ್ದರು. ಮನೆಯ ಸಮೀಪದಲ್ಲಿ ನದಿ ಇದ್ದು, ಒಂದು ವೇಳೆ ಮಗು ತಾಯಿ ಹಾಗೂ ಅಜ್ಜಿಯನ್ನು ಹಿಂಬಾಲಿಸಿಕೊಂಡು ಹೋಗಿ ನದಿಗೆ ಇಳಿದಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ.

ಮಾಹಿತಿ ತಿಳಿದ ಕೂಡಲೇ ಮಗುವಿಗಾಗಿ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಆದರೆ ಇಲ್ಲಿವರೆಗೆ ಮಗು ಪತ್ತೆಯಾದ ಮಾಹಿತಿ ಲಭ್ಯವಾಗಿಲ್ಲ.

You may also like

Leave a Comment