Home » ಬೆಳ್ತಂಗಡಿ | ಸುಶಾನ್ ಚಂದ್ರ ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ ಪ್ರಕಟಿಸಿದ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಯುವ ಮೋರ್ಚಾ ವತಿಯಿಂದ ಮನವಿ

ಬೆಳ್ತಂಗಡಿ | ಸುಶಾನ್ ಚಂದ್ರ ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ ಪ್ರಕಟಿಸಿದ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಯುವ ಮೋರ್ಚಾ ವತಿಯಿಂದ ಮನವಿ

0 comments

ಲಾಯಿಲ ಗ್ರಾಮದ ಬೂತ್ 68 ರ ಯುವ ಮೋರ್ಚಾ ಸಂಚಾಲಕರಾದ ಸುಶನ್ ಚಂದ್ರ ಇವರ ಬಗ್ಗೆ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾನ ಹಾನಿಕರ ಪೋಸ್ಟ್ ಪ್ರಕಟಿಸಿದ ಹಿನ್ನಲೆಯಲ್ಲಿ, ಇಂದು ತಾಲೂಕು ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಉಪಾಧ್ಯಕ್ಷರಾದ ಪ್ರಮೋದ್ ದಿಡುಪೆ,ಲಾಯಿಲ ಶಕ್ತಿ ಕೇಂದ್ರ ಅಧ್ಯಕ್ಷರಾದ ಸುಧಾಕರ್ ಬಿ.ಎಲ್, ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಆರ್. ಮತ್ತು ಪಕ್ಷದ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

You may also like

Leave a Comment